ಕೋವಿಡ್ 19 : ರಾಜಸ್ಥಾನ ಕಾಂಗ್ರೆಸ್ ಶಾಸಕ ಕೈಲಾಶ್ ತ್ರಿವೇದಿ ಸಾವು
ಗುರುಗ್ರಾಮ,ಅಕ್ಟೋಬರ್ 06 : ಕೊರೋನಾ ಸೋಂಕಿನಿಂದಾಗಿ ರಾಜಸ್ಥಾನದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸಹಾದಾ ಶಾಸಕ ಕೈಲಾಶ್ ತ್ರಿವೇದಿ ಅವರು ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೂರು ಬಾರಿ ಶಾಸಕರಾಗಿದ್ದ ತ್ರಿವೇದಿ ಅವರು ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದರು.
ಅವರ ಆರೋಗ್ಯವು ಹದಗೆಟ್ಟ ನಂತರ ಅಕ್ಟೋಬರ್ 2 ರಂದು ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ 08;17ಕ್ಕೆ ಮೃತಪಟ್ಟಿದ್ದಾರೆ.