ಜಿಲ್ಲಾ ಉಪಾಧ್ಯಕ್ಷರಾಗಿ ರಾಜಶೇಖರ್ ಹಿರೇಮಠ ಆಯ್ಕೆ
ತಾಳಿಕೋಟಿ : ರಾಷ್ಟ್ರೀಯ ಬೇಡ ಜಂಗಮ ಸಂಘಟನೆ ಒಕ್ಕೂಟದ ಅಡಿಯಲ್ಲಿ ನೂತನವಾಗಿ ರಚನೆಯಾದ ರಾಷ್ಟ್ರೀಯ ನೌಕರರ ಸಂಘಟನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಾಜಶೇಖರ್ ಹಿರೇಮಠ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಯಿತು .ಇತ್ತೀಚಿಗೆ ವಿಜಯಪುರದ ಜಾಲಹಳ್ಳಿಯ ಶ್ರೀ ಜಯಶಾಂತೇಶ್ವರ ಮಠದಲ್ಲಿ ಬೇಡ ಜಂಗಮ ಸಮಾಜದ ರಾಷ್ಟ್ರೀಯ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪರಮಪೂಜ್ಯಶ್ರೀ ರಾಮ ಲಿಂಗಯ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಮಾಜದ ಹಿತರಕ್ಷಣ ಸಭೆಯಲ್ಲಿ ರಾಷ್ಟ್ರೀಯ ನೌಕರರ ಸಂಘಟನೆಯನ್ನು ರಚಿಸಲಾಯಿತು ಇದರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಾಜು ಹಿರೇಮಠರನ್ನು ಆಯ್ಕೆ ಮಾಡಲಾಯಿತು. ಸಾನಿಧ್ಯ ವಹಿಸಿ ಮಾತನಾಡಿದ ಶ್ರೀರಾಮ ಲಿಂಗಯ್ಯ ಮಹಾಸ್ವಾಮಿಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ರಚಿಸಿದ ಈ ಸಂಘಟನೆಯಲ್ಲಿ ನಮ್ಮ ಸಮಾಜದಿಂದ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಈಗಾಗಲೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು ನಿಸ್ವಾರ್ಥಭಾವದಿಂದ ಸಮಾಜಕ್ಕಾಗಿ ಕೆಲಸ ಮಾಡಬೇಕಾಗಿದೆ ಸಮಾಜಕ್ಕೆ ಸಿಗಬೇಕಾದ ನ್ಯಾಯಯುತವಾದ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟದ ಅಗತ್ಯ ಇದೆ ಎಂದರು. ಈ ಸಭೆಯಲ್ಲಿ ರಾಷ್ಟ್ರೀಯ ನೌಕರರ ಸಂಘಟನೆಯ ಪದಾಧಿಕಾರಿಗಳು ಬೇಡ ಜಂಗಮ ಕ್ಷಮಾಭಿವೃದ್ಧಿ ಸಂಘದ ಸದಸ್ಯರು ಸಮಾಜದ ಗಣ್ಯರು ಮಹಿಳಾ ಘಟಕದ ಮುಖ್ಯಸ್ಥರು ಹಾಗೂ ಹಿರಿಯರು ಉಪಸ್ಥಿತರಿದ್ದರು.