ರಾಣೆಬೆನ್ನೂರ

ರಾಜರಾಜೇಶ್ವರಿ ಕಾಲೇಜು ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ

ರಾಜರಾಜೇಶ್ವರಿ ಕಾಲೇಜು ಕೋವಿಡ್  ಲಸಿಕಾ ಜಾಗೃತಿ ಕಾರ್ಯಕ್ರಮ

ರಾಣೆಬೆನ್ನೂರು 04:  ತಾಲೂಕಿನ ಮಾಗೋಡು ಗ್ರಾಮಕ್ಕೆ ಸ್ಥಳೀಯ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕಿಯರು ಭೇಟಿ ನೀಡಿ ಗೋವಿದ್ ಲಸಿಕ ಜಾಗೃತಿ ಕುರಿತು ಮಾಹಿತಿ ನೀಡಿದರು. ಗ್ರಾಮದಲ್ಲಿರುವ ಪ್ರತಿ ಮನೆಗಳಿಗೆ ಭೇಟಿ ನೀಡಿದ ಸ್ವಯಂ ಸೇವಕಿಯರು ಕೋವಿಡ್ ರೋಗ ಹರಡುವಿಕೆಯ ಕಾರಣ ಮತ್ತು ಅದರ ನಿಯಂತ್ರಣ ಹಾಗೂ ಅದರ ಪರಿಪಾಲನೆ ಹೇಗೆ? ಯಾವ ರೀತಿ? ಅನುಸರಿಸುವ ಕ್ರಮಗಳೇನು? ಎನ್ನುವ ಕುರಿತು ಸಮಗ್ರ ಅರಿವು ಮೂಡಿಸುವಲ್ಲಿ  ವಿದ್ಯಾರ್ಥಿಗಳು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ, ಕಾಲೇಜು ಪ್ರಾಚಾರ್ಯ ನಾರಾಯಣ ನಾಯಕ್ ಎ,ಗ್ರಾ.ಪಂ.ಅಧಿಕಾರಿಗಳಾದ ಶಂಕರ್ ಪೂಜಾರ, ಪ್ರೊ :ವೀರೇಶ ಕುರಹಟ್ಟಿ, ಡಾ: ಕವಿತಾ ಗಡ್ಡದಗೋಳಿ, ಸೇರಿದಂತೆ ಪಂಚಾಯತ್ ಸದಸ್ಯರು, ಗ್ರಾಮದ ಮುಖಂಡರು, ಪಾಲ್ಗೊಂಡಿದ್ದರು. 


ಸುದ್ದಿ ಓದಿ