ರಾಣೆಬೆನ್ನೂರ

ರಾಜರಾಜೇಶ್ವರಿ ಕಾಲೇಜು: ಭಾರತ ಸಂವಿಧಾನ ದಿನಾಚರಣೆ

ರಾಜರಾಜೇಶ್ವರಿ ಕಾಲೇಜು: ಭಾರತ ಸಂವಿಧಾನ ದಿನಾಚರಣೆ

ರಾಣೆಬೆನ್ನೂರು 27:  ಭಾರತದ ಸಂವಿಧಾನ ರಚನೆಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ  ಮಹಾ ವಿದ್ಯಾಲಯದ ಉಪನ್ಯಾಸಕ ಪ್ರೊ : ಎಸ್ ಎಮ್ ಕೋರಿಶೆಟ್ಟರ್ ಹೇಳಿದರು. ಅವರು ಶನಿವಾರ ಕಾಲೇಜು ಸಭಾಭವನದಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿಶ್ವದ ಎಲ್ಲ ರಾಷ್ಟ್ರಗಳಿಗಿಂತಲೂ  ಭಾರತದ ಸಂವಿಧಾನ ಭದ್ರ ಮತ್ತು ಬಲಿಷ್ಠವಾಗಿದೆ, ಸಂವಿಧಾನಬದ್ಧವಾಗಿ ನಾಗರಿಕರು ನಡೆದುಕೊಂಡರೆ ಭಾರತ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ನಾರಾಯಣ್ ನಾಯಕ್ ಎ. ಅವರು, ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಅಧ್ಯಯನ ಮಾಡುತ್ತಿರಲಿ, ಭಾರತದ ಸಂವಿಧಾನದ ಬಗ್ಗೆ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು ಇದರಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಸಾಧಕವಾಗಲಿದೆ ಎಂದು ಕರೆ ನೀಡಿದರು. ಉಪನ್ಯಾಸಕ  ಎಮ್‌. ಜಿ.ಬೆಣಗೇರಿ, ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ  ಭೋದಿಸಿದರು. ಪ್ರೊ : ಅನುರಾಧ ಎಸ್, ಶೋಭಾ ದೊಡ್ಡ ನಾಗಳ್ಳಿ, ಸೇರಿದಂತೆ ಕಾಲೇಜ್ ಉಪನ್ಯಾಸಕರು ಉಪಸ್ಥಿತರಿದ್ದರು. ನೀಲಮ್ಮ ಪ್ರಾರ್ಥಿಸಿದರು. ಭೂಮಿಕಾ ಮಲ್ಲಜ್ಜಿ ಸ್ವಾಗತಿಸಿದರು. ಕಲ್ಪನಾ ಪಾಟೀಲ್ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ