ರಾಷ್ಟ್ರೀಯ

ಏಕಕಾಲಕ್ಕೆ 44 ಸೇತುವೆ ಲೋಕಾರ್ಪಣೆ ಗೊಳಿಸಿದ ರಾಜನಾಥ್ ಸಿಂಗ್

ಏಕಕಾಲಕ್ಕೆ  44 ಸೇತುವೆ  ಲೋಕಾರ್ಪಣೆ ಗೊಳಿಸಿದ ರಾಜನಾಥ್  ಸಿಂಗ್

ನವದೆಹಲಿ, ಅ 12: ಆರ್ಗನೈಸೇಷನ್ ವತಿಯಿಂದ 7 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇತುವೆಗಳನ್ನು  ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 10, ಲಡಾಖ್ನಲ್ಲಿ 8, ಹಿಮಾಚಲಪ್ರದೇಶದಲ್ಲಿ 3, ಪಂಜಾಬ್ನಲ್ಲಿ 4, ಉತ್ತರಾಖಂಡ್ನಲ್ಲಿ 8 , ಅರುಣಾಚಲದಲ್ಲಿ 8 ಹಾಗೂ ಸಿಕ್ಕಿಂನಲ್ಲಿ 4 ಸೇತುವೆಗಳು ನಿರ್ಮಾಣಗೊಂಡಿದ್ದು ಅವುಗಳನ್ನು ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಜೊತೆಗೆ ಅರುಣಾಚಲ ಪ್ರದೇಶದಲ್ಲಿ, ತವಾಂಗ್ಗೆ ಸಂಪರ್ಕಿಸುವ ರಸ್ತೆಯಲ್ಲಿ ನೆಚಿಪು ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೂ ಸಚಿವರು  ಅಡಿಗಲ್ಲು ಹಾಕಿದರು. ಇದೇ ವೇಳೆ ಮಾತನಾಡಿದ ಸಚಿವರು, ಏಕಕಾಲದಲ್ಲಿ ಹಲವಾರು ಸೇತುವೆಗಳ ಉದ್ಘಾಟನೆ ಮತ್ತು ಸುರಂಗದ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು ಒಂದು ದೊಡ್ಡ ದಾಖಲೆ. ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಈ ಸೇತುವೆಗಳು ಸಂಪರ್ಕ ಮತ್ತು ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಲಿವೆ  ಎಂಬ  ಆಶಾಭಾವನೆ ವ್ಯಕ್ತಪಡಿಸಿದರು. 



ಸುದ್ದಿ ಓದಿ