ರಾಜ ವೀರಮದಕರಿ ನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ
ರಾಣೇಬೆನ್ನೂರು 25: ಭಾರತ ದೇಶವು ಪರಂಪರೆಯಿಂದ ಇಡೀ ವಿಶ್ವಕೆಲ್ಲಾ ಪರಂಪರೆ ಸಾರಿದೆ ದೇಶವಾಗಿದೆ. ಭಾರತ ದೇಶ ಸಾಧು ಸಂತರು, ಋಷಿಮುನಿಗಳ ನಾಡಾಗಿದ್ದು ಅವರೆಲ್ಲರೂ ಸೇರಿ ಜಾತೀಯತೆಯನ್ನು ಹೋಗಲಾಡಿಸಲು ಅಂದಿನಿಂದ ಹೋರಾಟ ಮಾಡಿದರೂ ಸಹ ಜಾತಿ ವ್ಯವಸ್ಥೆ ತೊಲಗಲಿಲ್ಲ, ನಮ್ಮ ರಾಜ್ಯ ಸರ್ಕಾರವು ಜಾತಿ ಜಾತಿಗಳ ಮಧ್ಯೆ ಬೇದ ಭಾವವನ್ನು ಹುಟ್ಟಿಸಿ ತಮ್ಮ ಓಟ್ ಬ್ಯಾಂಕ್ಗಳನ್ನು ಮಾಡಿಕೊಂಡಿದ್ದಾರೆ. ಒಟ್ಟು 51 ಜಾತಿಗಳಿವೆ. ಈ ಜಾತಿಯತೆಯನ್ನು ಹೋಗಲಾಡಿಸಬೇಕಾದರೆ ಎಲ್ಲರೂ ಶಿಕ್ಷಣವಂತರಾಗಬೇಕು ನಮ್ಮ ದೇಶದ ಇತಿಹಾಸವನ್ನು ಓದಿದರೆ ಮಾತ್ರ ಇತಿಹಾಸವನ್ನು ಸೃಷ್ಟಿ ಮಾಡುತ್ತಾರೆ. ಓದದೇ ಇರುವವರು ಎನನ್ನೂ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ, ಹೋರಾಟದ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪ್ರಯತ್ನಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರ ಮಹಾಸ್ವಾಮಿಗಳು ಹೇಳಿದರು.
ರಾಣೇಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸಿದ್ಧಾರೂಡ ಮಠದಲ್ಲಿ ಸಿದ್ಧರೂಡ ಸ್ವಾಮಿ ಮಠದ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ ವೀರಮದಕರಿ ನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ ಅಭಿಪ್ರಾಯದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣವೇ ಆಸ್ತಿ ಎಂಬ ಉದ್ದೇಶದಿಂದ ತಾವುಗಳು ಕ್ರಿಯಾಶೀಲರಾಗಿ ಮಕ್ಕಳಿಗೆ ಗುರು ಹಿರಿಯರ ಧಾರ್ಮಿಕ ಮನೋಭಾವನೆಗಳನ್ನು ಮೂಡುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಅಳವಡಿಸಿಕೊಳ್ಳಬೇಕು. ಕೇವಲ ಶಾಲಾ ಮೂಲಕ ಎಲ್ಲಾ ಅಭಿವೃದ್ಧಿಗಳು ಮೂಡಲು ಸಾಧ್ಯವಿಲ್ಲ, ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ, ನಡೆ ನುಡಿಗಳ ಬಗ್ಗೆ ಪರೀಶೀಲಿಸಿ ಅದನ್ನು ತಿದ್ದುವ ಗುಣವನ್ನು ತಂದೆ ತಾಯಿಗಳು ರೂಡಿಸಿಕೊಳ್ಳಬೇಕು ಎಂದರು.
ಮಾಕನೂರು ಕ್ರಾಸ್ನಿಂದ ನಾಗೇನಹಳ್ಳಿಯ ಸಿದ್ದರೂಡ ಮಠದವರೆಗೆ ನೂರಾರು ಮಹಿಳೆಯರಿಂದ ಕುಂಭಮೇಳದ ಮೂಲಕ ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿ ನಂತರ ಗ್ರಾಮದ ಆಂಜನೇಯ ದೇವಾಸ್ಥಾನ ತಲುಪಿತು. ಕಾರ್ಯಕ್ರಮದಲ್ಲಿ ಐರಣಿ ಹೊಳಿಮಠದ ಪೀಠಾಧಿಪತಿ ಬಸವರಾಜ ದೇಷಿಕೇಂದ್ರ ಸ್ವಾಮಿಗಳು ಆರ್ಶಿವಚನ ನೀಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಸಿದ್ಧನಗೌಡ ಗೋವಿಂದಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಣೇಬೆನ್ನೂರು ಶಾಸಕರಾದ ಅರುಣುಕುಮಾರ ಪೂಜಾರ, ಮಾಜಿ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ, ನ್ಯಾಯವಾಧಿಗಳಾದ ಶಶಿಧರ ಮುದುಕನಗೌಡ್ರ, ಬಿ.ಇಒ ಮಾರುತಿ ಪಾಟೀಲ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕಾ ಘಟಕದ ಅಧ್ಯಕ್ಷ ಚಂದ್ರಣ್ಣ ಬೇಡರ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ತೇಜರಾಜ ಜಿ. ಹಲಸಬಾಳ ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿಗಳು ಹಾವೇರಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ, ಜಿ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಓಲೆಕಾರ, ನಗರ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಗ್ರಾ.ಪಂ. ಅಧ್ಯಕ್ಷ ಬೀರ್ಪ ಕರಿಯಣ್ಣನವರ, ಗ್ರಾ.ಪಂ. ಸದಸ್ಯರುಗಳು, ಕುಬೇರ್ಪ ಬೆಳ್ಳೂಡಿ, ನಾಗರಾಜ ಹುಲಿಗಿನಹೊಳೆ, ಷಣ್ಮಕನಗೌಡ ಸಣ್ಣಹನುಮನಗೌಡ್ರ, ನಾಗೇನಹಳ್ಳಿ, ಮುದೇನೂರು, ಸುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಇದ್ದರು. -05-