ನಿರಂತರ ಸುರಿದ ಮಳೆ ನೀರು ಸುಳಿ ಆಕಾರದಲ್ಲಿ ರಚನೆ
ಸವದತ್ತಿ-02: ಕಳೆದೆರಡು ದಿನಗಳಲ್ಲಿ ಸುರಿದ ಮಳೆಯಿಂದ ಇಲ್ಲಿನ ಮಲಪ್ರಭಾ ನದಿ ತೀರದ ಜ್ಯಾಕ್ವೆಲ್ ಸಮೀಪ ಮೋಡಗಳಿಂದ ಒಂದೇ ಜಾಗೆಯಲ್ಲಿ ಬೃಹತ್ ಪ್ರಮಾಣದ ನೀರು ಸುರಿದಿದೆ. ನಿರಂತರ 20 ನಿಮಿಷಗಳ ಕಾಲ ಒಂದೇ ಜಾಗೆಯಲ್ಲಿ ನಿರಂತರ ಸುರಿದ ನೀರು ಸುಳಿ ಆಕಾರದಲ್ಲಿ ರಚನೆಗೊಂಡು ನೋಡುಗರಿಗೆ ಅಚ್ಚರಿ ಮೂಡಿಸಿದೆ. ಅಲ್ಲಿದ್ದ ಕೆಲವರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಆಕರ್ಷಕ ಬಿಂದುವಾಗಿದ್ದ ಈ ದೃಷ್ಯವನ್ನು ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನ ವಿಕ್ಷಿಸಿ ಇಷ್ಟ ಪಟ್ಟಿದ್ದಾರೆ.