ಹಾವೇರಿ

ಮಳೆ, ಬೆಳೆಗಾಗಿ ದುಗರ್ಾದೇವಿ, ಮಾಯವ್ವ ದೇವಿಯರ ಪಲ್ಲಕ್ಕಿ ಮಹೋತ್ಸವ

ಮಳೆ, ಬೆಳೆಗಾಗಿ ದುಗರ್ಾದೇವಿ, ಮಾಯವ್ವ ದೇವಿಯರ ಪಲ್ಲಕ್ಕಿ ಮಹೋತ್ಸವ


ಲೋಕದರ್ಶನ ವರದಿ 

ಶಿಗ್ಗಾವಿ 30: ಬಂಕಾಪುರದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಈ ಬಾರಿಯೂ ಕೂಡಾ ಖನೋಜಗಲ್ಲಿ ಹಾಗೂ ಮಾಗಿಕೇರಿ ರೈತಾಪಿ ಕುಟುಂಬದವರಿಂದ ಸಮೃದ್ಧ ಮಳೆ, ಬೆಳೆಗಾಗಿ ಪ್ರಾಥರ್ಿಸಿ  ದುಗರ್ಾದೇವಿ ಹಾಗೂ ಮಾಯವ್ವ ದೇವಿಯರ ಪಲ್ಲಕ್ಕಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

     ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಖನೋಜಗಲ್ಲಿಯ ಶ್ರೀ ದುಗರ್ಾದೇವಿ ದೇವಸ್ಥಾನದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ರಸ್ತೆಯ ಉದ್ದಕ್ಕೂ ಭಕ್ತರು ಮಾಯವ್ವ ಹಾಗೂ ದುಗರ್ಾದೇವಿಯರಿಗೆ ಹಣ್ಣು ಕಾಯಿ ಹೂವಿನಮಾಲೆ ಸಮಪರ್ಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು. 

     ಪಲ್ಲಕ್ಕಿ ಮಹೋತ್ಸವ ಸಾಗಿಬಂದು ಬಾಡ ಗ್ರಾಮದ ಶರಹದ್ದಿನಲ್ಲಿರುವ ಶ್ರೀ ಬಂಕನಾಥ ದೇವಸ್ಥಾನದ ಆವರಣಕ್ಕೆ ಬಂದು ತಲುಪಿತು. ನಂತರ ಭಕ್ತ ಜನಸಾಗರದಿಂದ ಶ್ರೀ ಬಂಕನಾಥ ಸ್ವಾಮಿಗೆ ಮಹಾರುದ್ರಾಭಿಷೇಕ ಸಹಶ್ರ ಭಿಲ್ವಾರ್ಚನೆ ಸೇರಿದಂತೆ ವಿವಿದ ಪೂಜಾ ಕೈಂಕರ್ಯಗಳು ನೆರವೇರಿದವು. ಜೋಗಮ್ಮನವರಿಂದ ಶ್ರೀ ದೇವಿಯರಿಗೆ ಚವರಿ ಸೇವೆ ನಡೆದು ಈ ವರ್ಷದಂತೆ ಪ್ರತಿವರ್ಷವೂ ಕೂಡಾ ಧರೆಗೆ ಸಮೃದ್ಧವಾದ ಮಳೆ ಸುರಿಸಿ ಒಳ್ಳೆಯ ಬೆಳೆ ನೀಡುವಂತೆ ಪ್ರಾಥರ್ಿಸಿದರು. ನಂತರ ಹರಿದುಬಂದ ಭಕ್ತ ಜನಸಾಗರಕೆ ಅನ್ನ ಪ್ರಸಾದದ ಸೇವೆ ನಡೆಯಿತು.

     ಯಲ್ಲಪ್ಪ ದ್ವಾಸಿ, ಸೋಮಂತ ಪೂಜಾರ, ನಿಂಗಪ್ಪ ಮಾಯಣ್ಣವರ, ಹನುಮಂತಸಿಂಗ್ ಬಾಬುಸಿಂಗನವರ, ಶಿವಾನಂದ ಈರಪ್ಪನವರ, ರಾಜು ಹುಲಗೂರ, ಪರಶುರಾಮ ಜೋಗಿನ, ಬಸವರಾಜ ಮಾಗಿ, ಉಮೇಶ ಪೂಜಾರ, ಗುರುಶಾಂತಪ್ಪ ದ್ವಾಸಿ, ವೀರಯ್ಯ ಕಟಗಿಮಠ, ನಿಂಗಪ್ಪ ಸವೂರ, ನರಸಪ್ಪ ಛವಿ, ವಿನಾಯಕ ಪೂಜಾರ, ಹನಮಂತ ದ್ವಾಸಿ, ನಿಂಗಪ್ಪ ಕಟಗಿ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.

 

ಸುದ್ದಿ ಓದಿ