ರಾಷ್ಟ್ರೀಯ

ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈಲು ತಡೆ ಚಳವಳಿ

ಕೇಂದ್ರದ  ಕೃಷಿ ನೀತಿ ವಿರೋಧಿಸಿ ರೈಲು ತಡೆ ಚಳವಳಿ

ನವದೆಹಲಿ, ಸೆಪ್ಟೆಂಬರ್ 18: ಕೇಂದ್ರದ  ಕೃಷಿ ತಿದ್ದುಪಡಿ  ಮಸೂದೆ ,ಧೋರಣೆ  ವಿರೋಧಿಸಿ ಇದೇ   24ರಿಂದ 26 ರವರೆಗೆ ರೈಲು ರೋಕೋ ಚಳವಳಿ  ನಡೆಸುವುದಾಗಿ ರೈತ ಸಂಘಟನೆ ಎಚ್ಚರಿಸಿದೆ. 

ಕೃಷಿ ಕ್ಷೇತ್ರದ ಮೂರು  ಮಸೂದೆ ವಿರುದ್ಧ ರೈಲು ತಡೆ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಥೇರ್ ತಿಳಿಸಿದ್ದಾರೆ.

ಈ ಮಸೂದೆ ವಿರುದ್ಧ ಈಗಾಗಲೇ ಕಿಸಾನ್ ಸಂಘ ಅಮೃತ್ ಸರದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಮಸೂದೆ ರೈತರಿಗೆ ವರದಾನವಾಗಲಿದೆ ಎಂಬುದು ಹಸಿ ಸುಳ್ಳು. ಮಸೂದೆ ಜಾರಿಯಾದರೆ ಮುಂದೆ ರೈತರು  ಉದ್ಯಮಿಗಳ  ಕೈಗೊಂಬೆಯಾಗಬೇಕಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. 

ರೈತ ವಿರೋಧಿ ಮಸೂದೆ ವಿರೋಧಿಸಿ ಇದೆ 25ರಂದು ವಿವಿಧ ರೈತಪರ ಸಂಘಟನೆಗಳು ಪಂಜಾಬ್ ಬಂದ್ ಗೆ ಕರೆ ನೀಡಿವೆ. ಇದೆ ವಿಚಾರವಾಗಿ ಕೇಂದ್ರ ಸಚಿವೆ ಹಸಿಮತ್ ಕೌರ್  ಸಂಪುಟಕ್ಕೆ  ರಾಜಿನಾಮೆ  ನೀಡಿ ಹೊರ ಬಂದಿದ್ದಾರೆ. 

ಸುದ್ದಿ ಓದಿ