ಬಿಜೆಪಿ ಷಡ್ಯಂತ್ರದಿಂದ ಸತೀಶ್ ಜಾರಕಿಹೊಳಿ ಮನೆ ಮೇಲಿನ ದಾಳಿ : ಬಿ.ನಬೀಸಾಬ್ ಆರೋಪ
ಲೋಕದರ್ಶನ ವರದಿ
ಬಿಜೆಪಿ ಷಡ್ಯಂತ್ರದಿಂದ ಸತೀಶ್ ಜಾರಕಿಹೊಳಿ ಮನೆ ಮೇಲಿನ ದಾಳಿ : ಬಿ.ನಬೀಸಾಬ್ ಆರೋಪ
ಕಂಪ್ಲಿ 12: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸತೀಶ ಜಾರಕಿ ಹೊಳಿ ಅವರ ವರ್ಚಸ್ಸು ಹೆಚ್ಚಿದ್ದು, ಮತ್ತು ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಹಿನ್ನಲೆ ಬಿಜೆಪಿ ಕುತಂತ್ರದ ಇಡಿ ದಾಳಿಯಾಗಿದ್ದು, ಇದನ್ನು ತೀವ್ರವಾಗಿ ಮಾನವ ಬಂದುತ್ವ ವೇದಿಕೆ ಖಂಡಿಸುವ ಜೊತೆಗೆ ಮುಂಬರುವ ದಿನದಲ್ಲಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತೇವೆ ಎಂದು ಮಾನವ ಬಂದುತ್ವ ವೇದಿಕೆಯ ಕಂಪ್ಲಿ ತಾಲೂಕು ಸಂಚಾಲಕ ಬಿ.ನಬಿಸಾಬ್ ಹೇಳಿದರು. ಪಟ್ಟಣದ ಅತಿಥಿ ಗೃಹದಲ್ಲಿ ಶನಿವಾರ ನಡೆದ ಸಂಘಟನಾ ಸಭೆಯಲ್ಲಿ ಮಾನವ ಬಂದುತ್ವ ವೇದಿಕೆ ಸಂಸ್ಥಾಪಕ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲಿನ ದಾಳಿ ಖಂಡಿಸಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭೀತಿಯಿಂದ ಹಾಗೂ ಅವರ ರಾಜಕೀಯ ಉದ್ದೇಶಪೂರ್ವಕವಾಗಿ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿಸಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ರಾಜ್ಯದ ಬಿಜೆಪಿವರ ಮಾತನ್ನು ಕೇಳಿಕೊಂಡು ಕೇಂದ್ರದ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು, ಮುಖಂಡರನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಸತೀಶ್ ಜಾರಕಿಹೊಳಿ ಅವರ ಜನಪ್ರಿಯತೆ ಸಹಿಸದೇ ಈ ರೀತಿ ದಾಳಿ ನಡೆಸಲಾಗಿದೆ. ಆದರೆ, ಜಾರಕಿಹೊಳಿ ಅವರು ಈ ದಾಳಿಗೆ ಕಾನೂನಾತ್ಮಕವಾಗಿಯೇ ಸೂಕ್ತ ಉತ್ತರ ನೀಡಲಿದ್ದಾರೆ. ಮತ್ತು ಅವರ ಜೊತೆಗೆ ಇಡೀ ರಾಜ್ಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರಿದ್ದೇವೆ. ಇದೇ ತರನಾಗಿ ದಾಳಿ ಮುಂದುವರೆಸಿದರೆ, ರಸ್ತೆಗೆ ಇಳಿದು ಹೋರಾಟದ ಮೂಲಕ ಬಿಜೆಪಿ ಚಳಿ ಬಿಡಿಸಲಾಗುವುದು ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು, ಮುಖಂಡರಾದ ಸಣಾಪುರ ಮರಿಸ್ವಾಮಿ, ವಸಂತರಾಜ ಕಹಳೆ, ವರದಿ ಜಾಫರ್, ರವಿ ಮಣ್ಣೂರು, ವಾಸು, ರಾಜಾಭಕ್ಷಿ, ಶಿವರಾಮ ಇದ್ದರು.
12-ಕಂಪ್ಲಿ-02: ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿಯನ್ನು ಮಾನವ ಬಂದುತ್ವ ವೇದಿಕೆ ಕಂಪ್ಲಿ ತಾಲೂಕು ಸಂಚಾಲಕ ಬಿ.ನಬೀಸಾಬ್ ನೇತೃತ್ವದಲ್ಲಿ ಖಂಡಿಸಿದರು.