ರಾಹುಲ್ ಗಾಂಧಿ- ಪ್ರಿಯಾಂಕಾ ಕಂಬನಿ
ನವದೆಹಲಿ,ನವೆಂಬರ್ 25: ಹಿರಿಯ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಅವರ ನಿಧನಕ್ಕೆ
ಪಕ್ಷದ ಮುಖಂಡ, ಸಂಸದ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ
ಪ್ರಿಯಾಂಕಾ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಗುಜರಾತ್ ರಾಜ್ಯಸಭಾ ಸದಸ್ಯರಾಗಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ
(ಎಐಸಿಸಿ) ಖಜಾಂಚಿಯೂ ಆಗಿದ್ದ ಅಹ್ಮದ್ ಪಟೇಲ್ ಗುರುಗ್ರಾಮ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸಂತಾಪ ಸಂದೇಶದಲ್ಲಿ
ರಾಹುಲ್ ಗಾಂಧಿ, 'ಇದು ದುಃಖದ ದಿನ.ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದರು.
ಅವರು ಕಾಂಗ್ರೆಸ್ ನಲ್ಲೆ ವಾಸಿಸುತ್ತಿದ್ದರು ಮತ್ತು ಉಸಿರಾಡಿದರು ಮತ್ತು ಪಕ್ಷದ ಅತ್ಯಂತ ಕಠಿಣ ಕಾಲದಲ್ಲಿ
ನಿಂತವರು.
ಕಾಂಗ್ರೆಸ್
ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ನಲ್ಲಿ 'ಅಹ್ಮದ್ ಜಿ ಒಬ್ಬ ಬುದ್ಧಿವಂತ ಮತ್ತು ಅನುಭವಿ ಸಹೋದ್ಯೋಗಿ
ಮಾತ್ರವಲ್ಲ, ಸಲಹೆಗಾರ , ಸ್ನೇಹ ಜೀವಿಯಾಗಿ ಸದಾ ಪಕ್ಷದ ಜೊತೆ ಇರುತ್ತಿದ್ದರು ಎಂದು ಕಂಬನಿ ಮಿಡಿದಿದ್ದಾರೆ.