ರಾಷ್ಟ್ರೀಯ

ರಾಹುಲ್- ಸೋನಿಯಾ ಚಕ್ಕರ್, ಫಾರೂಕ್ ಅಬ್ದುಲ್ಲಾ ಹಾಜರ್ ..!!

ರಾಹುಲ್-  ಸೋನಿಯಾ ಚಕ್ಕರ್,  ಫಾರೂಕ್ ಅಬ್ದುಲ್ಲಾ  ಹಾಜರ್ ..!!

ನವದೆಹಲಿ, ಸೆಪ್ಟೆಂಬರ್ 14: ಲೋಕಸಭೆ ವಿರೋಧಪಕ್ಷದ ಬೆಂಚುಗಳಲ್ಲಿ ಮೊದಲ ಆಸನಗಳನ್ನು ಡಿಎಂಕೆ ಸಂಸದ ಟಿಆರ್ ಬಾಲು, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರಿಗೆ ಮೀಸಲಿಡಲಾಗಿತ್ತು. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಅವರ ವಾರ್ಷಿಕ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವುದರಿಂದ ಅವರು ಕಲಾಪಕ್ಕೆ ಹಾಜರಾಗಲಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜಧಾನಿ ದೆಹಲಿಗೆ ಆಗಮಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ವಿರೋಧ ಪಕ್ಷದ ಬೆಂಚಿನ ಎರಡನೆಯ ಸಾಲಿನಲ್ಲಿ ಕುಳಿತಿದ್ದರು.

ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಯಾವುದೇ ವಿರಾಮವಿಲ್ಲದೆ ಪಾಳಿಗಳಲ್ಲಿ ನಡೆಯಲಿವೆ. ಸೋಮವಾರ ಲೋಕಸಭೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ನಡೆದಿದ್ದರೆ, ರಾಜ್ಯಸಭೆ 3 ಗಂಟೆಯಿಂದ ಕಲಾಪ ನಡೆಸಲಿದೆ.  

ಮಂಗಳವಾರದಿಂದ ರಾಜ್ಯಸಭೆ  ಬೆಳಿಗ್ಗೆ ನಾಲ್ಕು ಗಂಟೆ ಕಲಾಪ ನಡೆಸಿದರೆ, ನಂತರ ಲೋಕಸಭೆ ಸಂಜೆಯ ಅವಧಿಯಲ್ಲಿ ಸೇರಲಿದೆ.

ಸುದ್ದಿ ಓದಿ