ರಾಘವೇಂದ್ರ ಸ್ವಾಮಿ 355 ನೇ ಆರಾಧನಾ
ಬೆಳಗಾವಿ. 26 - ವಡಗಾವಿಯ ವಝೆಗಲ್ಲಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ 355 ನೇ ಆರಾಧನಾ ಮಹೋತ್ಸವವನ್ನು ಇದೇ ದಿ. 29 ಶನಿವಾರ, 30 ರವಿವಾರ ಮತ್ತು ದಿ. 31 ಸೋಮವಾರದಂದು ಶ್ರೀ ವೆಂಕಟೇಶ್ವರ ಸೇವಾ ಸಂಘದವರು ಹಮ್ಮಿಕೊಂಡಿದ್ದಾರೆ. ದಿ. 29 ರಂದು ಮುಂಜಾನೆ 9 ಕ್ಕೆ ಅಷ್ಟೋತ್ತರ, ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದವಿದ್ದು ಸಾಯಂಕಾಲ 6 ಗಂಟೆಗೆ ಗಾಯಕ ವಿನಾಯಕ ಮುತಾಲಿಕ ದೇಸಾಯಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿದೆ.
ದಿ 30 ರಂದು ಮುಂಜಾನೆ 9 ಕ್ಕೆ ಅಷ್ಟೋತ್ತರ, ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದವಿದ್ದು ಸಾಯಂಕಾಲ 6 ಗಂಟೆಗೆ ವಡಗಾವಿಯ ಶ್ರೀ ವೆಂಕಟೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವಿದೆ. ದಿ 31 ಸೋಮವಾರದಂದು ಮುಂಜಾನೆ 9 ಕ್ಕೆ ಅಷ್ಟೋತ್ತರ, ಅಭಿಷೇಕ, ಅಲಂಕಾರ, ಶ್ರೀ ಸತ್ಯನಾರಾಯಣ ಪೂಜೆ, ತೀರ್ಥಪ್ರಸಾದವಿದ್ದು ಸಾಯಂಕಾಲ 6 ಕ್ಕೆ ಶ್ರೀನಿಧಿ ಆಚಾರ್ಯ ಜಮನಿಸ ಇವರಿಂದ ಪ್ರವಚನವಿದೆ.ಭಕ್ತಾಧಿಗಳು ಇದರ ಸದುಪಯೋಗ ಪಡೆಯುವಂತೆ ಸ0ಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.