ಹೊಸಪೇಟೆ

ಮುಕ್ತವಾಗಿ ರ್ಯಾಗಿಂಗ್ ಅನ್ನು ವಿರೋಧಿಸಬೇಕು : ಅಂಬರೇಶ .ಕೆ

ಮುಕ್ತವಾಗಿ  ರ್ಯಾಗಿಂಗ್ ಅನ್ನು ವಿರೋಧಿಸಬೇಕು : ಅಂಬರೇಶ .ಕೆ

ಹಂಪಿ 14: ಇತ್ತೀಚಿನ ದಿನಗಳಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟು, ಸಂತೋಷ ಪಡುವ ಮನಸ್ಥಿತಿಗಳು ಹೆಚ್ಚಾಗಿವೆ. ಇದನ್ನು ನಾವೆಲ್ಲರೂ ಒಂದಾಗಿ ನಿರ್ಮೂಲನೆ ಮಾಡಬೇಕೆಂದು ಮಕ್ಕಳು ಹಕ್ಕುಗಳ ತರಬೇತಿದಾರರಾದ ಅಂಬರೇಶ ಕೆ. ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ 14ನೇ ಆಗಸ್ಟ್‌ 2024ರಂದು ರ್ಯಾಗಿಂಗ್ ತಡೆ ಘಟಕದಿಂದ ರಾ​‍್ಯಗಿಂಗ್ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪೋಸ್ಟರನ್ನು ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ರ್ಯಾಗಿಂಗ್ ಎನ್ನುವ ಭೂತ ಎಲ್ಲ ರಂಗದಲ್ಲಿದ್ದು, ಹೆಚ್ಚಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾಣಬಹುದು. ಇದರಿಂದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಭೌದ್ಧಿಕ ಅಂಶಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ನಾವು ನೋಡಿ ಸುಮ್ಮನಿರದೇ ಅದರ ವಿರುದ್ಧ ಎಲ್ಲರೂ ಹೋರಾಡಬೇಕಾಗಿದೆ. ಜನತೆಯನ್ನು ಜಾಗೃತಿಗೊಳಿಸುವ ಕರ್ತವ್ಯ ನಮ್ಮೆಲ್ಲರದು ಎಂದು ತಿಳಿಸಿದರು.  

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ, ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳ ಮನಸ್ಸು ಸೂಕ್ಷ-್ಮವಾಗಿರುತ್ತದೆ. ಆ ಮನಸ್ಸಿಗೆ ಏನಾದರೂ ಗಾಸಿ ಉಂಟಾದಾಗ ಅದು ಗಂಭೀರ ಸ್ವರೂಪದ ಪರಿಣಾಮವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿ ಇದರಿಂದ ಅನೇಕ ಘನಘೋರ ಕೃತ್ಯಗಳು ನಡೆಯುತ್ತವೆ. ಆದ್ದರಿಂದ ರಾ​‍್ಯಗಿಂಗ್ ಮಾಡುವುದು ಅಪರಾಧ, ಅದನ್ನು ನೋಡಿ ಸುಮ್ಮನಿರುವುದು ಇನ್ನೊಂದು ದೊಡ್ಡ ಅಪರಾಧವಾಗಿದೆ. ಇನ್ನೂ ಅವಮಾನ ಎನ್ನುವುದು ಮನುಷ್ಯನನ್ನು ದಿನೇ ದಿನೇ ಕೊಲ್ಲುತ್ತದೆ ಆದ್ದರಿಂದ ಇಂತಹ ರಾ​‍್ಯಗಿಂಗ್ ಪ್ರಕರಣಗಳನ್ನು ನಡೆಯದಂತೆ ಆರಂಭದ ಹಂತದಲ್ಲಿಯೇ ತಡೆಗಟ್ಟುವ ಅಗತ್ಯತೆಯಿದೆ ಎಂದು ತಿಳಿಸಿದರು. 

ರಾ​‍್ಯಗಿಂಗ್ ತಡೆ ಘಟಕದ ನೋಡಲ್ ಅಧಿಕಾರಿಗಳಾದ ಡಾ. ಜನಾರ್ದನ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಬೋಧಕ, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ