ರಾ.ರಾ. ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ
ರಾಣೆಬೆನ್ನೂರು 20: ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ದೇಶದ ಅಭಿವೃದ್ಧಿ ಮತ್ತು ಏಕತೆ ಕುರಿತಂತೆ ಆರ್ ಟಿ ಇ ಎಸ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ : ಸರಸ್ವತಿ ಬಮ್ಮನಾಳ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ್ ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್ಎಸ್ಎಸ್ ಘಟಕ 1 ಮತ್ತು 2 ರ, ಯೋಜನಾಧಿಕಾರಿಗಳಾದ ವಿವೇಕ್ ಕುರಹಟ್ಟಿ,ಡಾ: ಕವಿತಾ ಗಡ್ಡದಗೂಳಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ಶೋಭಾ ದೊಡ್ಡನಾಗಳ್ಳಿ ಸೇರಿದಂತೆ ಕಾಲೇಜು ವಿವಿಧ ವಿಭಾಗಗಳ ಉಪನ್ಯಾಸಕರು, ಅಧ್ಯಾಪಕರು ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು