ರಾಣೆಬೆನ್ನೂರ

ಆರ್‌ಟಿಇಎಸ್ ಕಾಲೇಜು ಸ್ವಯಂಪ್ರೇರಿತ ರಕ್ತದಾನ ಶಿಬಿರ

ಆರ್‌ಟಿಇಎಸ್ ಕಾಲೇಜು ಸ್ವಯಂಪ್ರೇರಿತ  ರಕ್ತದಾನ ಶಿಬಿರ


ಲೋಕದರ್ಶನ ವರದಿ 

ರಾಣೇಬೆನ್ನೂರು:  ಮನುಷ್ಯನಿಗೆ  ಯಾವುದೇ ಅವಘಡಗಳು  ಸಂಭವಿಸಿದಾಗ  ರಕ್ತದ  ಅವಶ್ಯಕತೆ  ತುಂಬಾ ಇರುತ್ತದೆ.  ಅಂತಹ  ಸಂದರ್ಭದಲ್ಲಿ  ಎಷ್ಟೇ ಹಣ  ಕೊಟ್ಟರೂ  ರಕ್ತ  ಪಡೆಯಲು  ಸಾಧ್ಯವಾಗುವುದಿಲ್ಲ.  ಅದಕ್ಕಾಗಿ ಯುವಸಮುದಾಯ  ಸ್ವಯಂಪ್ರೇರಿತವಾಗಿ  ರಕ್ತದಾನ  ಮಾಡುವುದರ  ಮೂಲಕ  ತಮ್ಮ ಮಾನವೀಯತೆ  ಮೆರೆಯಬೇಕಾದ  ಅಗತ್ಯವಿದೆ.  ಎಂದು  ಆರ್‌.ಟಿ.ಇ.ಎಸ್‌. ಕಾಲೇಜು ಅಧ್ಯಕ್ಷ  ಸುಭಾಸ್  ಸಾಹುಕಾರ್  ಹೇಳಿದರು.  

     ಅವರು  ಕಾಲೇಜು  ಸಾಹುಕಾರ್  ಸಭಾಭವನದಲ್ಲಿ  ಕಾಲೇಜು ರಾಷ್ಟ್ರೀಯ  ಸೇವಾಯೋಜಕ  ಘಟಕ ಮತ್ತು ಲಯನ್ಸ್‌ ಸೇವಾಸಂಸ್ಥೆ ಕಾನೂನು  ಮಹಾವಿದ್ಯಾಲಯ  ಸಂಯುಕ್ತವಾಗಿ  ಆಯೋಜಿಸಿದ್ದ  ಸ್ವಯಂಪ್ರೇರಣಾ  ರಕ್ತದಾನ  ಶಿಬಿರ  ಉದ್ಘಾಟಿಸಿ  ಮಾತನಾಡಿದರು.  ಶಿಬಿರದಲ್ಲಿ  45ಕ್ಕೂ  ಹೆಚ್ಚು ವಿದ್ಯಾರ್ಥಿಗಳು  ರಕ್ತದಾನ  ಮಾಡಿ  ತಮ್ಮ ಮಾನವೀಯತೆ  ಮೆರೆದರು.  ಕಾರ್ಯಕ್ರಮದಲ್ಲಿ ಲಯನ್ಸ್‌ ಅಧ್ಯಕ್ಷ ಟಿ. ಈರಣ್ಣ, ಟಿ.ಸಿ. ಪಾಟೀಲ್, ಕೊಟ್ರೇಶಪ್ಪ ಎಮ್ಮಿ,  ಪ್ರಭುಲಿಂಗಪ್ಪ ಹಲಗೇರಿ,  ಪ್ರಾಚಾರ್ಯ  ಎಫ್‌. ಹೆಚ್‌.  ಮಾಚೇನಹಳ್ಳಿ  ಯೋಜನಾಧಿಕಾರಿ  ಡಾ.  ಸರಸ್ವತಿ ಬಮ್ಮನಾಳ  ಡಾ.  ಸ್ವಪ್ನ ಮುದಗಲ್,  ಡಾ. ಮಧುಕುಮಾರ್ ಆರ್, ಎಂ. ಎಸ್‌. ಅರಕೇರಿ, ಶ್ರೀಧರ್ ಜಿ. ಆರ್‌.  ಡಾ. ಕೊಟ್ರೇಶ್ ಬಸಪ್ಪನವರ, ಸೇರಿದಂತೆ  ಕಾಲೇಜು ಉಪನ್ಯಾಸಕರು  ಲಯನ್ಸ್‌  ಪದಾಧಿಕಾರಿಗಳು  ಗಣ್ಯರು  ರಕ್ತದಾನಿಗಳು  ಮತ್ತಿತರೆ ಗಣ್ಯರು  ಉಪಸ್ಥಿತರಿದ್ದರು. 


ಸುದ್ದಿ ಓದಿ