ಆರ್ಟಿಇಎಸ್ ಕಾಲೇಜು: ಕನಕದಾಸರ ಜಯಂತೋತ್ಸವ
ಲೋಕದರ್ಶನ ವರದಿ
ರಾಣೇಬೆನ್ನೂರು 25: ನಗರ ಹೂರ ವಲಯ ಆರ್ ಟಿ ಇ ಎಸ್ ಕಾಲೇಜು ಸಾವುಕಾರ ಸಭಾಭವನದಲ್ಲಿ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ 534ನೇ ಜಯಂತೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಪ್ರಾಚಾರ್ಯ ಎಫ್.ಹೆಚ್ ಮಾಚೇನಹಳ್ಳಿ ಅವರು ಕನಕದಾಸರ ಜೀವನ ಸಾಧನೆ ಮತ್ತು ಅವರು ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಿ.ಎ.ಹರಿಹರ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಸರಸ್ವತಿ ಬಮ್ಮನಾಳ ಸೇರಿದಂತೆ ಮತ್ತಿತರೆ ಉಪನ್ಯಾಸಕರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.