ಆರ್ಟಿಈಎಸ್ ಕಾಲೇಜು: ಅರಿವು ಜಾಗೃತಿ ಕಾರ್ಯಕ್ರಮ
ರಾಣೇಬೆನ್ನೂರ.ಡಿ.23: ಇಲ್ಲಿನ ಆರ್.ಟಿ.ಈ.ಎಸ್. ಕಾಲೇಜು ಸಾಹುಕಾರ ಸಭಾ ಭವನದಲ್ಲಿ ಇತ್ತೀಚೆಗೆ ಯುವ ಜಾಗೃತಿ ಅರಿವು ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಎಫ್.ಹೆಚ್.ಮಾಚೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿ ಪ್ರತಿಭಾ ಹಡಗಲಿ ಅವರು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ಡಾಽಽ ಸರಸ್ವತಿ ಹೆಚ್. ಬಮ್ಮನಾಳ, ಉಪನ್ಯಾಸಕ ಸಿ.ಎ.ಹರಿಹರ, ಐಕ್ಯೂಎಸಿ ಸಂಯೋಜಕ ಡಾಽಽ ಮಧುಕುಮಾರ ಆರ್., ಡಾಽಽ ಸ್ವಪ್ನಾ ಮುದಗಲ್ ಸೇರಿದಂತೆ ಮತ್ತಿತರ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.