ರಾಷ್ಟ್ರೀಯ

ಶೇ.4ರ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಶೇ.4ರ ರೆಪೋ ದರದ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಮುಂಬೈ, ಅ 9 :ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಯ ಸಮಿತಿ ಶುಕ್ರವಾರ ಶೇ.4ರ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಅವಿರೋಧವಾಗಿ ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿದಾಸ್‌ ದಾಸ್‌ ಹೇಳಿದ್ದಾರೆ.ಪರಿಣಾಮವಾಗಿ ಸಾಲಗಾರರಿಂದ ಆರ್‌ಬಿಐ ಪಡೆಯುವ ರಿವರ್ಸ್‌ ರೆಪೋ ದರ ಶೇ.3.35ರಷ್ಟಿದೆ  ಎಂದು ತಿಳಿಸಿದ್ದಾರೆ.ತಮ್ಮ ದ್ವೈಮಾಸಿಕ ನೀತಿಯನ್ನು ಘೋಷಿಸಿರುವ ಆರ್‌ಬಿಐ ಗವರ್ನರ್, ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಭಾರತ 'ನಿರ್ಧಾರಿತ ಹಂತ' ತಲುಪುತ್ತಿದೆ ಎಂದಿದ್ದಾರೆ.2021ರ ಮಾರ್ಚ್‌ಗೆ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.9.5ರಷ್ಟಿರಲಿದೆ ಎಂದು ಆರ್‌ಬಿಐ ಹೇಳಿದೆ. ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಸಹಿಷ್ಣುತೆಯ ಶ್ರೇಣಿಯ ಮೇಲ್ಭಾಗದಲ್ಲಿಯೇ ಇರುವುದರಿಂದ ಇತ್ತೀಚಿನ ಎಂಪಿಸಿ ನಿರ್ಧಾರ ಬಂದಿದೆ. ಇದು ಶೇಕಡಾ 6 ಕ್ಕಿಂತ ಹೆಚ್ಚಿದೆ, ಆಗಸ್ಟ್‌ನಲ್ಲಿ ಶೇಕಡಾ 6.69 ಮತ್ತು ಜುಲೈನಲ್ಲಿ 6.73 ರಷ್ಟಿತ್ತು. 


ಸುದ್ದಿ ಓದಿ