ಟ್ವೀಟರ್ ನಲ್ಲಿ ಹೆಚ್ಚು ಅನುಯಾಯಿಗಳು.. ಆರ್ ಬಿ ಐ ವಿಶ್ವದ ನಂಬರ್ ಒನ್
ಮುಂಬೈ,
ನವೆಂಬರ್ 23: ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ
ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವ ಕೇಂದ್ರ ಬ್ಯಾಂಕ್ ಆಗಿ ಭಾರತೀಯ ರಿಸರ್ವ್ ಬ್ಯಾಂಕ್
(ಆರ್‌ಬಿಐ) ಹೊರಹೊಮ್ಮಿದೆ.
ಭಾನುವಾರದ ವೇಳೆಗೆ ಆರ್‌ಬಿಐ ಟ್ವಿಟರ್ ಖಾತೆ ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಅಮೆರಿಕಾ ಫೆಡರಲ್ ರಿಸರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗಿಂತಲೂ ಆರ್ ಬಿ ಐ ಹೆಚ್ಚು ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿರುವುದು ಗಮನಾರ್ಹ.
ಆದರೆ, ಎರಡನೇ ಸ್ಥಾನದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಮೆಕ್ಸಿಕೊ 7.74 ಲಕ್ಷ, ಬ್ಯಾಂಕ್ ಆಫ್ ಇಂಡೋನೇಷ್ಯಾ 7.57 ಲಕ್ಷ ಅನುಯಾಯಿಗಳನ್ನು ಹೊಂದಿದೆ.
ವಿಶ್ವದ ಪ್ರಮುಖ ಕೇಂದ್ರ ಬ್ಯಾಂಕ್ ಆಗಿರುವ ಅಮೆರಿಕಾದ ಫೆಡರಲ್ ರಿಸರ್ವ್ ಕೇವಲ 6.77 ಲಕ್ಷ ಅನುಯಾಯಿಗಳನ್ನು ಹೊಂದಿದೆ. ವಿಶ್ವದ ಎರಡನೇ ಅತ್ಯಂತ ಶಕ್ತಿಶಾಲಿ ವಿತ್ತೀಯ ಪ್ರಾಧಿಕಾರವಾದ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ) ಟ್ವಿಟರ್‌ನಲ್ಲಿ 5.91 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಇಸಿಬಿಯ ನಂತರ ಸೆಂಟ್ರಲ್ ಬ್ಯಾಂಕ್ ಆಫ್ ಬ್ರೆಜಿಲ್ 3.82 ಲಕ್ಷ, ಬ್ಯಾಂಕ್ ಆಫ್ ಇಂಗ್ಲೆಂಡ್ 3.17 ಲಕ್ಷ, ಬ್ಯಾಂಕ್ ಆಫ್ ಕೆನಡಾ 1.80 ಲಕ್ಷ , ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ 1.16 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಆರ್ ಬಿ ಐ ಟ್ವಿಟರ್ ಖಾತೆ ಇಂದು ಒಂದು ಮಿಲಿಯನ್ ಅನುಯಾಯಿಗಳಿಗೆ ತಲುಪಿದೆ. ಇದೊಂದು ಮೈಲುಗಲ್ಲು. ಆರ್ ಬಿ ಐ ನಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.