ಆರ್ಬಿಐ 2021-22ನೇ ಸಾಲಿನ ಮೊದಲ ವಿತ್ತೀಯ ನೀತಿ
ಮುಂಬೈ,ಏಪ್ರಿಲ್ 07: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ -ಆರ್ಬಿಐ 2021-22ನೇ ಸಾಲಿನ ಮೊದಲ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.ಆರ್ ಬಿಐನಿಂದ 2021-22ನೇ ಸಾಲಿನ ಮೊದಲ ವಿತ್ತೀಯ ನೀತಿ ಪ್ರಕಟ : ರೆಪೊ ದರ ಯಥಾಸ್ಥಿತಿ ಕೊರೋನಾವೈರಸ್ ಪ್ರಕರಣಗಳು ಮತ್ತು ವೈರಸ್ ಹರಡುವಿಕೆ ತಡೆಯಲು ಸರ್ಕಾರ ಹೊಸ ನಿರ್ಬಂಧಗಳನ್ನು ಹೇರಿದ ನಂತರ, ಆರ್ಬಿಐ ಬುಧವಾರ ಮಾನದಂಡದ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.ರೆಪೊ ದರವನ್ನು ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಥಿಕ ಬೆಳವಣಿಗೆಯ ದರವನ್ನು ಕೂಡ ಬದಲಾಯಿಸದೆ ಶೇಕಡಾ 10.5ರಷ್ಟು ಹಣಕಾಸು ವರ್ಷ 2021-22ರಲ್ಲಿ ಇರಬಹುದು ಎಂದು ಕೂಡ ಅಂದಾಜಿಸಿದೆ.