ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಮೆಗಾಸ್ಟಾರ್ ಹಾಕಿದರೆ ಬ್ರೇಕ್ ....?
ಚೆನ್ನೈ, ಜನವರಿ 1: ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ .. ಹೊಸ ಪಕ್ಷ ಪ್ರಕಟಿಸುವ ಮೊದಲೇ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ತಮಗೆ ಆರೋಗ್ಯ ಸೂಕ್ತವಾಗಿ ಸಹಕರಿಸುತ್ತಿಲ್ಲ, ಹಾಗಾಗಿ ರಾಜಕೀಯ ಪಕ್ಷ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಜನಿಕಾಂತ್ ಕೆಲ ದಿನಗಳ ಎಂದು ಹೇಳಿ... ಇದಕ್ಕಾಗಿ ಅಭಿಮಾನಿಗಳು ಹಾಗೂ ಜನರು ಕ್ಷಮಿಸಬೇಕು ಎಂದು ಪತ್ರದ ಮೂಲಕ ಕೋರಿದ್ದರು. ಆದರೆ, ರಜನಿಕಾಂತ್ ರಾಜಕೀಯ ಪ್ರವೇಶಿಸಬಾರದು ಎಂ ನಿರ್ಣಯ ಏಕೆ ಕೈಗೊಂಡರು ಎಂಬ ಬಗ್ಗೆ ತಮಿಳು ನಾಡು ರಾಜಕೀಯದಲ್ಲಿ ಸಾಕಷ್ಟು ಊಹಾ ಪೋಹಗಳು ಕೇಳಿಬರುತ್ತಿವೆ.
ಶೀಘ್ರದಲ್ಲಿಯೇ ರಾಜಕೀಯ ಪಕ್ಷ ಸ್ಥಾಪಿಸಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದ ರಜನಿಕಾಂತ್, ಒಂದೊಮ್ಮೆ ತಾವು ಚುನಾವಣಾ ಕಣಕ್ಕಿಳಿದರೆ.. ತಮಗೆ ಎಷ್ಟು ಸ್ಥಾನಗಳು ಬರಬಹುದು, ಎಷ್ಟು ಮತಗಳು ಬರಬಹುದು ಎಂಬ ಬಗ್ಗೆ ಎರಡು - ಮೂರು ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸಿದ್ದರಂತೆ.. ಸಮೀಕ್ಷಾ ವರದಿಗಳನ್ನು ನೋಡಿ ರಜನಿಕಾಂತ್ ಆಘಾತಕ್ಕೊಳಗಾದರಂತೆ. ಸಮೀಕ್ಷೆಯ ವರದಿಗಳ ಪ್ರಕಾರ, ರಜನಿಕಾಂತ್ ಆರಂಭಿಸಲಿರುವ ಪಕ್ಷ 20 ಕ್ಕೂ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿಲ್ಲ ಸಮೀಕ್ಷಾ ವರದಿಗಳು ಸ್ಪಷ್ಟಪಡಿಸಿವೆ ಎಂಬುದು ಸುದ್ದಿ. ಈ ಸಮೀಕ್ಷಾ ವರದಿಗಳನ್ನು ನೋಡಿದ ನಂತರ, ರಜನಿಕಾಂತ್ ಅವರಿಗೆ ಆಂಧ್ರ ಪ್ರದೇಶದಲ್ಲಿ ಚಿರಂಜೀವಿ ಸ್ಥಾಪಿಸಿದ್ದ ರಾಜಕೀಯ ಪಕ್ಷ ಪ್ರಜಾ ರಾಜ್ಯಂ ಆದ ಗತಿಯನ್ನು ನೆನಪಿಸಿಕೊಂಡು ತಮ್ಮ ನಿರ್ಧಾರ ಬದಲಿಸಿಕೊಂಡಿದ್ದಾರೆ ಎಂದು ಕೆಲವರು ಚರ್ಚಿಸುತ್ತಿದ್ದಾರೆ.
ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗದೆ.. ಮತ್ತೆ ಸಿನಿಮಾ ರಂಗಕ್ಕೆ ಅಡಿ ಇರಿಸಿದ್ದರು ಚಿರಂಜೀವಿ. ಮತ್ತೆ ರಾಜಕೀಯ ಪ್ರವೇಶಿಸಬಾರದು ಎಂದು ನಿರ್ಣಯಿಸಿಕೊಂಡರು. ರಾಜಕೀಯ ಪಕ್ಷ ಆರಂಭಿಸುವ ವಿಷಯದಲ್ಲಿ ರಜನಿಕಾಂತ್ ಕೂಡಾ ಚಿರಂಜೀವಿ ರೀತಿಯಲ್ಲೇ ಆಲೋಚನೆ ಮಾಡಿದಂತಿದೆ. ಅಷ್ಟೇ ಅಲ್ಲ ಹೈದ್ರಾಬಾದ್ ಇರುವಷ್ಟು ದಿನ ರಜನಿಕಾಂತ್ ಈ ವಿಷಯದ ಬಗ್ಗೆ ಚಿರಂಜೀವಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ. ನಮ್ಮಂತವರು ರಾಜಕೀಯಕ್ಕೆ ಸರಿಹೊಂದುವುದಿಲ್ಲ... ಅಲ್ಲಿ ಯಶಸ್ಸು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಚಿರಂಜೀವಿ ರಜಿನಿಕಾಂತ್ ಗೆ ಹೇಳಿದ್ದಾರೆ ಎನ್ನಲಾಗಿದೆ.
ರಾಜಕೀಯ ಪ್ರವೇಶಿಸಿದರೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಾನಸಿಕ ಶಾಂತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಚಿರಂಜೀವಿ ರಜನಿಕಾಂತ್ ಅವರಿಗೆ ಹೇಳಿದ್ದಾರೆ ಎಂದು ಕೆಲವರು ಚರ್ಚಿಸುತ್ತಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಯಾವುದೇ ಸಾಹಸಗಳಿಗೆ ಕೈಹಾಕದಂತೆ ಮಾಡದಂತೆ ರಜನಿಕಾಂತ್ ಅವರಿಗೆ ಟಾಲಿವುಡ್ ಮೆಗಾಸ್ಟಾರ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಏತನ್ಮಧ್ಯೆ, ರಜನಿಕಾಂತ್ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾದ ಹಿನ್ನಲೆಯಲ್ಲಿ ಅವರನ್ನು ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಕಂಡುಬರುತ್ತಿದೆ. ಒಟ್ಟಾರೆ ರಾಜಕೀಯಕ್ಕೆ ಬರುವ ಮುನ್ನವೇ ರಜನಿಕಾಂತ್ ನೋ ಪಾಲಿಟಿಕ್ಸ್ ಎಂದಿರುವ ಹಿಂದೆ ಚಿರಂಜೀವಿ ಅವರ ಸಲಹೆ ಇದೆ ಎಂಬ ಮಾತುಗಳು ದಟ್ಟವಾಗಿವೆ.