ರಾಣೆಬೆನ್ನೂರ

ಆರ್‌. ಟಿ.ಇ.ಎಸ್‌. ಕಾಲೇಜು: "ಸ್ಪರ್ಧಾ ಸಂಭ್ರಮ" ಕಾರ್ಯಕ್ರಮ

ಆರ್‌. ಟಿ.ಇ.ಎಸ್‌. ಕಾಲೇಜು: "ಸ್ಪರ್ಧಾ ಸಂಭ್ರಮ" ಕಾರ್ಯಕ್ರಮ

ಆರ್‌. ಟಿ.ಇ.ಎಸ್‌. ಕಾಲೇಜು: "ಸ್ಪರ್ಧಾ ಸಂಭ್ರಮ" ಕಾರ್ಯಕ್ರಮ  

ರಾಣೆಬೆನ್ನೂರು  25:ಜ್ಞಾನ ಸಂಪತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇದ್ದೇ ಇರುತ್ತದೆ ಅದನ್ನು ಸಮರ್ಥವಾಗಿ ಅಧ್ಯಯನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕವಾಗಿ ಪ್ರತಿಭೆ ಮೆರೆಯಲು ಸಾಧ್ಯವಾಗಲಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಪ್ರೊ, ಎಸ್‌. ವ್ಹಿ.ಸಂಕನೂರು ಹೇಳಿದರು.    ಅವರು ನಗರ ಹೊರ ವಲಯದ ಆರ್‌. ಟಿ.ಇ.ಎಸ್ ಕಾಲೇಜು ಸಾಹುಕಾರ ಸಭಾಭವನದಲ್ಲಿ, ಡಾ, ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಸಂಶೋಧನಾ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸಮಾಜಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಆಯೋಜಿಸಿದ್ದ, "ಸ್ಪರ್ಧಾ ಸಂಭ್ರಮ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

      ಸ್ಪರ್ಧೆ ಎಲ್ಲರಲ್ಲಿಯೂ ಇದೆ. ಆದರೆ, ಸ್ಪರ್ಧಾತ್ಮಕವಾಗಿ ಕ್ರೀಯಾ ಯೋಜನೆಗಳನ್ನು ರೂಪಿಸುವ ಕುರಿತು ತರಬೇತಿ ಬಹಳ ಮುಖ್ಯವಾಗಿದೆ ಎಂದು ವಿವರಿಸಿ ಮಾತನಾಡಿದ ಸಂಕನೂರ, ಇಂತಹ ಕಾರ್ಯಗಾರಗಳು ಇಂದಿನ ವಿದ್ಯಾರ್ಥಿಗಳಲ್ಲಿ  ಹೊಸ ಚೈತನ್ಯ ನೀಡಲಿವೆ ಎಂದರು. ಪ್ರಾಂಶುಪಾಲ ಪ್ರೊ, ಸಿ. ಎ.ಹರಿಹರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

      ಮುಖ್ಯ ಅತಿಥಿಗಳಾಗಿ ಲಯನ್ಸ್‌ ಮಾಜಿ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಬ್ಯಾಡಗಿ ತಾಲೂಕ ಕಾ.ನಿ. ಪ. ಸಂಘದ ಅಧ್ಯಕ್ಷ, ಶಿವಾನಂದ ಮಲ್ಲನಗೌಡರ,ಕ. ವಿ. ವಿ. ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ, ಮಂಜುನಾಥ ತಲ್ಲೂರು, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾಹುಕಾರ, ಕಾರ್ಯಾಧ್ಯಕ್ಷ ಶ್ರೀಮತಿ ಸೀತಾ  ಕೋಟಿ, ಸಂಯೋಜಕರಾದ, ಡಾ, ಆನಂದ ಕಾನಪೇಟೆ, ಡಾ,ಮಧುಕುಮಾರ ಆರ್, ಗ್ರಂಥಪಾಲಕ ಡಾ, ಪಿ. ಬಿ. ಕೊಪ್ಪದ, ಸೇರಿದಂತೆ  ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು. ಸ್ಪರ್ಧಾ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂ 


ಸುದ್ದಿ ಓದಿ