ಸಂಕಲ್ಪಿತ ಕಾಮಗಾರಿಗಳು ಶೀಘ್ರ ಪೂರ್ಣ: ಶೇಖಪ್ಪ ಹೊಸಗೌಡ್ರ
ರಾಣೇಬೆನ್ನೂರು 06: ವಾಣಿಜ್ಯ ನಗರದ ಬೆಂಚಿನ ಮರಡಿಯಲ್ಲಿರುವ ಶ್ರೀ ತುಂಗಾಜಲ ಚೌಡೇಶ್ವರಿ ದೇವಿಯು ಈ ಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿ ಆಶಿರ್ವಾದ ನೀಡುತ್ತಿದ್ದಾರೆ. ಭಕ್ತರ ಸಕಲ ಇಷ್ಟಾರ್ಥವನ್ನು ಈಡೇರಿಸುವ ದೇವಿಯು ತನ್ನ ಅಪೇಕ್ಷೆಯಂತೆ ಭಾರಿ ಪ್ರಮಾಣದ ಮತ್ತು ವಿಶಾಲವಾದ ಮಂದಿರವನ್ನು ನಿರ್ಮಿಸಿಕೂಂಡಿದ್ದಾಳೆ. ಇದೀಗ ಕಳಸಪ್ರಾಯವೆಂಬಂತೆ ಭಕ್ತರ ಬೇಡಿಕೆ ಮತ್ತು ನೀರೀಕ್ಷೆಯಂತೆ ದೇವಸ್ಥಾನಕ್ಕೆ ಮಹಾಗೋಪೂರವನ್ನು ನೀರ್ಮಾಣ ಕಾಮಗಾರಿ ಇಂದಿನಿಂದ ಆರಂಭವಾಗಿದೆ. ಎಂದು ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಕಮೀಟಿಯ ಅಧ್ಯಕ್ಷ ಸೇಖಪ್ಪ ಹೊಸಗೌಡ್ರ ಹೇಳಿದರು.
ಅವರು ಶುಕ್ರವಾರ ಮುಂಜಾನೆ ಮಹಾಗೋಪೂರ ನಿರ್ಮಾಣ ಕಾಮಗಾರಿಗೆ ಕಮೀಟಿಯ ಸದಸ್ಯರೂಂದಿಗೆ ಶ್ರೀದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ಇತಿಹಾಸದಲ್ಲಿ ಇದೂ ಫಲವತ್ತಾದ ಕೃಷಿ ಜಮೀನಾಗಿತ್ತು ಇದರಲ್ಲಿ ದುಂಡು ಕಲ್ಲಿನ ರೋಪದಲ್ಲಿ ತನ್ನ ದೀವ್ಯ ದರ್ಶನವನ್ನು ನೀಡುತ್ತಿದ್ದಳು. ಕಾಲಾನುಗಟ್ಟದಲ್ಲಿ ಸಣ್ಣ ದೇವಾಲಯವಾಗಿ ಇಂದು ಬಹು ಭಕ್ತರ ಮತ್ತು ನಗರದ ನಾಗರೀಕರ ಸಂಕಲ್ಪಿತ ಯೋಜನೆಯಂತೆ ವಿಶಾಲ ದೇವಾಲಯವಾಗಿದೆ. ನಿತ್ಯವು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಮಂಗಳವಾರ-ಶುಕ್ರವಾರ ವಿಶೇಷ ಪೂಜೆ ಪುನಸ್ಕಾರಕ್ಕೆ ಭಕ್ತರು ಹರಿದು ಬರುವ ಧರ್ಮ ಜಾಗ್ರತಿಯ ದೇವಾಲಯ ಇದಾಗಿದೆ ಎಂದು.
ದೇವಾಲಯದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ಮತ್ತು ಅತೀ ಎತ್ತರ ಉಳ್ಳ ಆಕರ್ಷಕ ಗೋಪೂರ ನೀರ್ಮಾಣಕ್ಕೆ ಮುಂದಾಗಿದ್ದೇವೆ, ಎಲ್ಲವು ಆ ದೇವಿಯ ಇಚ್ಚೇಯಂತೆಯೇ ನಡೆಯುತ್ತಲಿದೆ, ಇದೇಲ್ಲವು ಚೌಡೇಶ್ವರಿ ದೇವಿಯ ಮಹಿಮೆ ಎಂದು ಇಲ್ಲಿನ ಇತಿಹಾಸ ಸ್ಮರಿಸಿ ಮಾತನಾಡಿದ ಹೊಸಗೌಡ್ರ ಅವರು ಈ ಗೋಪೂರ ಬಹು ಆಕರ್ಷಣೆಯಲ್ಲಿ ನಾಡಿನ ಎಲ್ಲ ದೇವಾನು ದೇವತೆಗಳ ಶಿಲ್ಪಗಳನ್ನು ಅಳವಡಿಸುವುದರ ಮೂಲಕ ನೀರ್ಮಾಣವಾಗಲಿದೆ. ಭಕ್ತರು ತಮ್ಮ ತನು, ಮನ ಮತ್ತು ಧನದ ಜೂತೆಗೆ ಕಮೀಟಿಯೂಂದಿಗೆ ಸಹಕರಿಸಿ ದೇವಿಯ ಕೃಪೇಗೆ ಪಾತ್ರರಾಗುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಐ.ಬಿ ಮುದಗಣ್ಣನವರ, ಸಹ ಕಾರ್ಯದರ್ಶಿ ಪ್ರಮೋದ್ ಕೋಪರ್ಡೆ, ನ್ಯಾಯವಾದಿ ಏಕಾಂತ ಮುದಿಗೌಡ್ರ, ಉಪಾಧ್ಯಕ್ಷ ಕೆ.ಹೆಚ್. ಜಾಡರ, ಶಿವಣ್ಣ ಬೆನಕನಕೂಂಡ, ದುರ್ಗಪ್ಪ ಹುಲಗಮ್ಮನವರ, ಬಸವರಾಜಯ್ಯ ಮಳಿಮಠ, ವಿರೂಪಾಕ್ಷಪ್ಪ ಮರಡಿಬಣಕಾರ, ಗಂಗಾಧರ ಕರ್ಜಗಿ, ಲಕ್ಷ್ಮಣ ಎಲ್.ಆರ್ ಸಾಲಿ, ಮತ್ತು ಉಮ್ಮೇಶ ಭಟ್, ಮಹೇಂದ್ರ್ಪ ಗುಂಡಗಟ್ಟಿ, ಅಶೋಕಪ್ಪ ಬಗಾಡೆ, ನಾಗರಾಜ ರಿತ್ತಿ, ಹೊನ್ನಪ್ಪ ಗೌಡ್ರ, ವೆಂಕಟೇಶ ರಿತ್ತಿ, ಚಂದ್ರು ಅಲಗೂರ, ವಿರೂಪಾಕ್ಷಪ್ಪ ಬುಕಶಟ್ಟರ, ಮಂಜುನಾಥ ಕಾಸಲ, ಅರ್ಚಕ ಚಂದ್ರಶೇಕರಯ್ಯ ದಿಗ್ಗಿಮಠ, ಶಿಲ್ಪಿ ಸಿದ್ದೇಶ, ಪ್ರವೀಣ್, ಎಲ್ಲಪ್ಪ ಕಾಂಪೌಂಡ ಸೇರಿದಂತೆ ಸಮೀತಿಯ ಸದಸ್ಯರು ಗಣ್ಯರು ಆ ಭಾಗದ ನಾಗರೀಕರು ಪಾಲ್ಗೂಂಡಿದ್ದರು.
ಭಕ್ತಿ ಸೇವೆ ಸಲ್ಲಿಸುವವರು- ಖಾತೆ ಸಂಖ್ಯೆ:376602010150881- ಋಖಅ: ಗಃಋ-0537667 ಗಓಋಓ ಃಂಓಏ, ಖಂಓಇಃಇಓಓಗಖ- ಒಓ: 9448873974) ಸಂಪರ್ಕಿಸುವಂತೆ ಕೋರಿದರು.