ಕುಷ್ಟಗಿ

ಟೇಬಲ್ ಕೆಳಗಡೆ ಕೈ ಒಡಾಡಬಾರದು; ಶಾಸಕ ದೊಡ್ಡನಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ

ಟೇಬಲ್ ಕೆಳಗಡೆ ಕೈ ಒಡಾಡಬಾರದು; ಶಾಸಕ ದೊಡ್ಡನಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ

ಕುಷ್ಟಗಿ 13; ಟೇಬಲ್ ಕೆಳಗಡೆ ಕೈ ಒಡಾಡಬಾರದು, ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ರೈತರು ಎದುರು ಬಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ತೋಟಗಾರಿಕೆ  ಅಧಿಕಾರಿ ವಿರುದ್ಧ ಕೀಡಿಕಾರಿದರು. 

ಜಿಲ್ಲಾ ಪಂಚಾಯಿತಿ ಕೊಪ್ಪಳ ಹಾಗೂ ತಾಲೂಕು ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಗ್ಗೆ ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ತ್ರೈಮಾಸಿಕ ಕೆ.ಡಿ.ಪಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ತಮ್ಮ ಪ್ರಗತಿ ವರದಿಯೊಂದಿಗೆ ಭಾಗವಹಿಸಬೇಕು. ನಿಮ್ಮ ಜೊತೆ ನಾನು ನಮ್ಮ ಜೊತೆ ನೀವು ಇಬ್ಬರು ಕೊಡಿ ಸಹಕಾರ ಮನೋಭಾವದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲೂಕನ್ನು ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು. 

ತಾಲೂಕು ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರ ಪ್ರಗತಿ ವರದಿ ವಾಚಿಸಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅತ್ಯುತ್ತಮವಾಗಿ ಹೆರಿಗೆಗಳು ನಡೆಯುತ್ತಿವೆ. ತಾಲೂಕಿನ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಎಂದು ಶಾಸಕರ ಬಳಿ ಮನವಿ ಮಾಡಿದರು. ಸರಕಾರ ಎಲ್ಲಾ ಬಗೆಯ ಔಷಧಿಗಳು ಸರಬರಾಜು ಮಾಡಿದ್ದರು, ಕೆಲವು ವೈದ್ಯರು ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಬರೆದು ಕೊಡುತ್ತಿದ್ದಾರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಟಿಎಚ್ಓ ಅವರಿಗೆ ತರಾಟೆಗೆ ತೆಗೆದುಕೊಂಡರು. 

ಕೃಷಿ ಇಲಾಖೆ:- ವಾಡಿಕೆಯಂತೆ ಕುಷ್ಟಗಿ ಹಾಗೂ ತಾವರಗೇರಿ, ಹನುಮಸಾಗರ ಭಾಗದಲ್ಲಿ ಮಳೆ ಕಡಿಮೆಯಾದ ಪರಿಣಾಮ ಮುಂಗಾರು ಹಂಗಾಮಿ ಬಿತ್ತನೆ ಕಾರ್ಯ ಕುಂಠಿತವಾಗಿದೆ. ತಾಲೂಕಿನಲ್ಲಿ ಅತೀ ಹೆಚ್ಚು ತೊಗರಿ, ರಸ ಗೊಬ್ಬರ ಆವಕ ಕಡಿಮೆ 6000 ಹೆಕ್ಟೇರ್ ಬಿತ್ತನೆ ಗುರಿ ಇದೆ. ಪ್ರಸಕ್ತ ಸಾಲಿನಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಸಹಾಯಕ ಕೃಷಿ ನಿದರ್ೆಶಕ ತಿಪ್ಪೇಸ್ವಾಮಿ ತಿಳಿಸಿದರು. 

ಕೃಷಿ ಇಲಾಖೆಯಲ್ಲಿ ಬಹುದಿನಗಳಿಂದ ಕೆಲವು ಸಿಬ್ಬಂದಿಗಳು ತಳ ಹೂರಿದ್ದಾರೆ ಇದರಿಂದ  ಸರಕಾರದ ಯೋಜನೆಗಳು ನಿಜವಾದ ರೈತರಿಗೆ ಮುಟ್ಟುತ್ತಿಲ್ಲ ಎಂದು ಶಾಸಕ ಕೃಷಿ ಅಧಿಕಾರಿ ವಿರುದ್ಧ ಹರಿಹಾಯ್ದರು. ಎಸ್ಸಿ ಎಸ್ಟಿ ಜನಾಂಗ ಹಾಗೂ ಸಾಮಾನ್ಯ ರೈತರಿಗೆ ಪ್ರತಿ ಹೋಬಳಿವಾರು ತಲಾ 600 ತಾಡಪಲ್ ನಂತೆ 8 ಗ್ರಾಮ ಪಂಚಾಯಿತಿಗಳಿಗೆ 2500 ತಾಡಪಾಲು ಸರಕಾರದಿಂದ ಬಂದಿರುತ್ತವೆ. ಎಸ್ಸಿಎಸ್ಟಿ ಜನಾಂಗದ ರೈತರು ಈಗಾಗಲೇ ತಾಡಪಾಲು ಪಡೆದಿದ್ದಾರೆ. 

ಇನ್ನೂ ಕೆಲವು ಗ್ರಾಮ ಪಂಚಾಯಿತಿಯ ಸಾಮಾನ್ಯ ಜನಾಂಗದ ತಾಡಪಾಲುಗಳು ಬಾಕಿ ಇವೆ ಎಂದು ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಸಭೆಗೆ ತಿಳಿಸಿದರು. 

ಶಿಕ್ಷಣ:- ಹಂಚಿನಾಳ ಹಾಗೂ ವಕ್ಕುಂದುಗರ್ಾ ಗ್ರಾಮದಲ್ಲಿ ಕುಷ್ಟಗಿ ತಾಲೂಕಿನ ಬಹು ದೊಡ್ಡ ಕಟ್ಟಡ 2014-15 ನೇ ಸಾಲಿನಲ್ಲಿ ನಿಮರ್ಿಸಲಾಗಿದೆ ಇಲಾಖೆಗೆ ಹಸ್ತಾಂತರ ಮಾಡಿಲ್ಲ ಇದರಿಂದ ಕಟ್ಟಡ ನಾಶವಾಗುತ್ತದೆ ಕೂಡಲೇ ಇಲಾಖೆ ಅಧಿಕಾರಿಗಳು ಹಸ್ತಾಂತರಿಸಿಕೊಳ್ಳಬೇಕು. 

258 ಶಾಲೆಗಳ ಪೈಕಿ 103 ರಾಜ್ಯಪಾಲರ ಹೆಸರಿಗೆ ನೊಂದಣಿ ಮಾಡಲಾಗಿದೆ. 61 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಕಿ ಇದೆ. ಇನ್ನೂಳಿದ ಶಾಲೆಗಳ ನೊಂದಣಿ ಸ್ಥಿತಿ ಗತಿ ಸಮಸ್ಯೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಸುರೇಂದ್ರ ಕಾಂಬಳೆ ಶಾಸಕರ ಗಮನಕ್ಕೆ ತಂದರು. 

ನಿವೇಶನ ಮಾಲೀಕರು ಸರಕಾರಕ್ಕೆ ದಾನವಾಗಿ ನೀಡಿದ ಆಸ್ತಿಗಳನ್ನು ನಿಷ್ಕಾಳಜೀ ವಹಿಸದೇ ಒಂದು ವಾರದೊಳಗೆ ರಾಜ್ಯಪಾಲರ ಹೆಸರಿಗೆ ನೊಂದಣಿ ಮಾಡಿಕೊಳ್ಳಿ ಎಂದು ಶಾಸಕ ಬಿಇಓಗೆ ಸಲಹೆ ನೀಡಿದರು. 

ತಾಲೂಕಿನಲ್ಲಿರು ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಬಯಿಸಿ ಲಿಖಿತ ಪರೀಕ್ಷೆ ಬರೆದ್ದಿದ್ದಾರೆ ಸುಮಾರು 1000 ವಿದ್ಯಾಥರ್ಿಗಳು ಪರೀಕ್ಷೆ ಯಲ್ಲಿ ತೇರ್ಗಡೆಯಾಗುವ ಸಂಭವವಿದೆ ಎಂದು ಪ್ರಗತಿ ವರದಿ ವಾಚಿಸಿದರು. 

ಸಿ.ಡಿ.ಪಿ.ಓ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಯಲ್ಲಮ್ಮ ಹಂಡಿ ಸಭೆಗೆ ಪ್ರಗತಿ ವರದಿ ವಾಚಿಸಿ ತಾಲೂಕಿನಲ್ಲಿ ಒಟ್ಟು 403 ಅಂಗನವಾಡಿ ಕೇಂದ್ರಗಳ ಪೈಕಿ 285  ಸ್ವಂತ ಕಟ್ಟಡ ಹೊಂದಿವೆ. 56 ಜಾಗ ಗುರುತಿಸಲಾಗಿದೆ. ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಸುತ್ತಿವೆ. 8 ಕೇಂದ್ರಗಳು ಸಮುದಾಯ ಭವನದಲ್ಲಿ ಕಾರ್ಯನಿರ್ವಸುತ್ತಿವೆ. 15 ಗ್ರಾಮಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಪ್ರಸ್ತಾವನೆಗೆ ಕಳುಹಿಸಲಾಗಿದೆ. 

2021-22 ನೇ ಸಾಲಿನಲ್ಲಿ ಆಯ್ಕೆಯಾದ  ನಿರಲೂಟಿ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಸಂಬಂಧಿಸಿದ ಗುತ್ತಿಗೆದಾರರು ನಿಮರ್ಿಸಿಲ್ಲ ವಿಳಂಭ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿಡಿಪಿಓ ಅವರು ಶಾಸಕರ ಗಮನ ಸೆಳೆದರು. 

ಕೆ.ಆರ್.ಐ.ಡಿ.ಎಲ್ ಇಲಾಖೆ:- ವತಿಯಿಂದ ಕೆ.ಕೆ.ಆರ್ಡಿ.ಬಿ ಅನುದಾನದಲ್ಲಿ ತಾಲೂಕಿನ ಹನುಮಸಾಗರದಲ್ಲಿ ಅಂಬಾ ಭವಾನಿ ಯಾತ್ರಾ ನಿವಾಸ, ತಾವರಗೇರಿ ಹಾಗೂ ಹನುಮಸಾಗರದಲ್ಲಿ ಒಳ ಕ್ರೀಡಾಂಗಣ ನಿಮರ್ಾಣ ಕಾಮಗಾರಿ ಪ್ರಗತಿ ಹಂತದಲ್ಲಿ ನಡೆಯುತ್ತಿದೆ. 

ಹನುಮನಾಳ ಪಿ.ಯು ಕಾಲೇಜ, ಮುದೇನೂರ ಹೈಸ್ಕೂಲ್, ದೋಟಿಹಾಳ, ಲಿಂಗದಳ್ಳಿ, ಮಡಿಕೇರಿ, ಹಿರೇ ತೆಮ್ಮಿನಾಳ, ಬಿಸನಾಳ, ಕಬ್ಬರಗಿ, ಕೊರಡಕೇರಾ ಶಾಲಾ ಕಟ್ಟಡ ಆಗಸ್ಟ್ ತಿಂಗಳಲ್ಲಿ ಮುಕ್ತಾಯ ಮಾಡಲಾಗುತ್ತದೆ ಎಂದು ಕೆ.ಆರ್.ಐ.ಡಿ.ಎಲ್ ಎಇಇ ಅನೀಲ್ ಪಾಟೀಲ್ ಹಾಗೂ ಎಇ ಇಫರ್ಾನ್ ಶಾಸಕರಿಗೆ ಪ್ರಗತಿ ವರದಿ ವಾಚಿಸಿದರು. 

ಸಮಾಜ ಕಲ್ಯಾಣಾಧಿಕಾರಿ ಬಾಲಚಂದ್ರ ಸಂಗನಾಳ ಪ್ರಗತಿ ವರದಿ ವಾಚಿಸಿ ತಾವರಗೇರಿ, ದೋಟಿಹಾಳ ಗ್ರಾಮದಲ್ಲಿ ಮಹಿಳಾ ವಸತಿ ನಿಲಯ ಕಟ್ಟಡ ನಿಮರ್ಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಿನುಗಾರಿಕೆ, ಸಾಮಾಜಿಕ ವಲಯ ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಿಮರ್ಿತಿ ಕೇಂದ್ರ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ ಕರ್ಣಂ ರಾಘವೇಂದ್ರ ರಾವ್ ಕುಲಕಣರ್ಿ, ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಕ ಅಧಿಕಾರಿ ಶಿವಪ್ಪ ಬಿರದಾರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಸುದ್ದಿ ಓದಿ