ರಾಣೆಬೆನ್ನೂರ

ಕನಕದಾಸ ಶಾಲೆ ಗಂಗಾ ಜಲದಿಂದ ಶುಚಿಕರಣ

ಕನಕದಾಸ ಶಾಲೆ ಗಂಗಾ ಜಲದಿಂದ ಶುಚಿಕರಣ
ಶಾಲಾಕಟ್ಟಡ ಹಾಗೂ ಆವರಣ ಶುಚಿತ್ವಗೊಳಿಸುತ್ತಿರುವ ಶಿಕ್ಷಕರು.

ರಾಣೀಬೆನ್ನೂರ 11: ಕರೋನಾ 2ನೇ ಅಲೆಯಿಂದ ತತ್ತರಿಸಿದ್ದ ದೇಶವು ಕ್ರಮೇಣವಾಗಿ ಮಹಾಮಾರಿಯ ಹಾವಳಿಯಿಂದ ಮುಕ್ತ ಗೊಂಡು ಜನ-ಜೀವನ ಯಥಾ ಸ್ಥಿತಿಗೆ ಬರುತ್ತಿದೆ. ಶಾಲಾ ಕಾಲೇಜುಗಳು ಕ್ರಮೇಣವಾಗಿ ಪ್ರಾರಂಭವಾಗುತ್ತಲಿವೆ.  

ಆದರೆ 3ನೇ ಅಲೆಯ ಭೀತಿ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಗ್ರಹಿಸುವಲ್ಲಿ ಶಾಲೆಗಳ ಶಿಕ್ಷಕ ವೃಂದದವರು ಮುಂಜಾಗ್ರತಾ ಕ್ರಮಗಳಿಗೆ ಮೊರೆ ಹೋಗಿದ್ದಾರೆ. ಮಕ್ಕಳನ್ನು ಅಂತರದಲ್ಲಿ ಕೂಡ್ರಿಸುವುದು, ಮಾಸ್ಕ್‌ ಧರಿಸಿ ಶಾಲೆಗೆ ಬರುವಂತೆ ಸೂಚಿಸಲಗುತ್ತಿದೆ. ಅಲ್ಲದೇ ಶಾಲೆ ಆರಂಭವಾಗುವ ಮುನ್ನ ಇಲ್ಲಿಯ ವಾಗೀಶ ನಗರದಲ್ಲಿರುವ ಕನಕದಾಸ ಪ್ರಾಥಮಿಕ ಶಾಲೆಯ ಶಿಕ್ಷಕರುಗಳು ತಾವೇ ಸ್ವತ: ಮುಂಚೂಣಿಯಲ್ಲಿದ್ದು ಶಾಲಾ ಕಟ್ಟಡ ಹಾಗೂ ಆವರಣವನ್ನು ಗಂಗಾಜಲದಿಂದ ಶುಚಿಗೊಳಿಸುತ್ತಿದ್ದಾರೆ. ಸ್ವಚ್ಛತೆ ಇದ್ದರೆ ಯಾವುದೇ ರೋಗ-ರುಜಿನ ಬರುವುದಿಲ್ಲವೆಂಬ ತತ್ವದಡಿ ಶಿಕ್ಷಕರುಗಳು ಶುಚಿತ್ವಕ್ಕೆ ಆದ್ಯತೆ ನೀಡಿರುವುದು ಶ್ಲಾಘನೀಯವಾಗಿದೆ. 

ಸುದ್ದಿ ಓದಿ