ಹಣೆಬರಹ ತಿದ್ದಲಿಲ್ಲ ಬ್ರಹ್ಮ : ದರ್ಶನ್
ಬೆಂಗಳೂರು, ನ. 16: ಕಾಣದ ಕೈಯಲಿ ಗೊಂಬೆಯು ನೀನು, ಹಣೆಬರಹ ತಿದ್ದುವರಾರಿಲ್ಲ ಎಂಬ ಸಾಲುಗಳು ತಮ್ಮನ್ನು ಕಾಡುತ್ತಿರುವುದಾಗಿ ನಟ ದರ್ಶನ್ ಹೇಳಿದ್ದಾರೆ.
ಪುನೀತ ನುಡಿನಮನ ಉದ್ದೇಶಿಸಿ ಮಾತನಾಡಿ, ಅಪ್ಪು ಈ ಸಮಾಜಕ್ಕೆ ಮಾಡುವ ಕೆಲಸಗಳು ಇನ್ನಷ್ಟು ಇದ್ದವು. ಆದರೆ ಬ್ರಹ್ಮದೇವ ಹಣೆಬರಹ ತಿದ್ದಲಿಲ್ಲ. ಆಯುಷ್ಯ ಹೆಚ್ಚಿಸಲಿಲ್ಲ ಎಂದು ಅಲವತ್ತುಕೊಂಡರು.
ಪುನೀತ್ ರಾಜ್ ಕುಮಾರ್ ಅವರ ಕಲೆ, ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸಿಕೊಂಡು ಸಾಗಬೇಕಿದೆ ಎಂದು ದರ್ಶನ್ ನುಡಿ ನಮನದಲ್ಲಿ ತಿಳಿಸಿದರು.