ಹಲ್ಲೆ ಆರೋಪಿಗಳಿಗೆ ಶಿಕ್ಷೆ ದಂಡ
ರಾಣೀಬೆನ್ನೂರ 16: ಮನೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋವ್ನ ಮೆಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಇಲ್ಲಿನ ಜೆ ಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ ಕಮತೆ ಅವರು ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ು ನೀಡಿದ್ದಾರೆ.
ತಾಲೂಕಿನ ಮೆಡ್ಲೇರಿ ತಾಂಡೆಯ ತಾವರೆಪ್ಪ ಲಮಣಿ, ಕರಿಯಪ್ಪ ಲಮಾಣಿ, ಪರಮೇಶಪ್ಪ ಲಮಾಣಿ, ನಂದೀಶ ಲಮಾಣಿ, ಲಚಮಪ್ಪ ಲಮಾಣಿ, ಗಂಗು ಲಮಾಣಿ, ಸಿದ್ದಪ್ಪ ಲಮಾಣಿ, ಬುಳ್ಳೆಪ್ಪ ಲಮಣಿ, ಶೇಖರಪ್ಪ ಲಮಾಣಿ, ದೇವೀಂದ್ರ್ಪ ಲಮಾಣಿ, ಶೇಶರ್ಪ ಲಮಾಣಿ ಇವರುಗಳು ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.
ತಮ್ಮ ತಾಂಡಾದ (ಮೆಡ್ಲೇರಿ) ಬೀರ್ಪ ಲಮಾಣಿ ಮತ್ತು ಅವರ ಮನೆ-ತನದವರ ಹೆಸರಿನಲ್ಲಿರುವ ರಿ ಸ ನಂ 71/1ದ 4ಎಕರೆ 36ಗುಂಟೆ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದರು. ಇದನ್ನು ನಿಲ್ಲಿಸುವಂತೆ ಬೀರಪ್ಪ ಲಮಾಣಿ ಅವರು ಆರೋಪಿಗಳಿಗೆ ಹೇಳಿದ್ದರು. ಬೀರ್ಪ ಲಮಾಣಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆಯೇ ಹಲ್ಲೆ ನಡೆಸಿದ್ದರು. ಸಂಬಂಧಿಸಿದಂತೆ ಬೀರಪ್ಪನು ದೂರು ನೀಡಲು ತೆರಳುತ್ತಿರುವಾಗ ಆರೋಪಿಗಳೆಲ್ಲರೂ ಸೇರಿಕೊಂಡು ಗಂಗಾಜಲ ತಾಂಡಾದ ಬಸ್ ನಿಲ್ದಾಣದ ಬಳಿ ಪುನ: ಬೀರ್ಪನ ತಲೆಗೆ ಹೊಡೆದು ಜೀವ ಬೆದರಿಕೆ ಹಾಕಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಎಲ್ಲಾ ಆರೋಪಿಗಳಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು ತಲಾ 1000ರೂ. ಗಳನ್ನು ನೀಡುವಂತೆ ಆದೇಶಿಸಿ ತೀರ್ು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಮಧುಮತಿ ಸಿದ್ನೂರಕರ್ ಅವರು ವಕಾಲತ್ತು ವಹಿಸಿದ್ದರು.