ಪುನೀತ ನಮನ: ದೊಡ್ಮನೆ ಕುಟುಂಬ ಭಾಗಿ
ಬೆಂಗಳೂರು, ನ. 16: ಪವರ್ ಸ್ಟಾರ್ ಪುನೀತ್ ವಿಧಿವಶರಾದ ನೋವಿನಿಂದ ಹೊರಬರಲು ಅಭಿಮಾನಿಗಳಾರಿಗೂ ಸಾಧ್ಯವಾಗುತ್ತಿಲ್ಲ. ಇನ್ನು ದೊಡ್ಮನೆ ಕುಟುಂಬದವರ ಪರಿಸ್ಥಿತಿ ಊಹಿಸಿಕೊಳ್ಳುವುದೂ ಕಷ್ಟ.
ಆದಾಗ್ಯೂ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜಕುಮಾರನನ್ನು ಸ್ಮರಿಸಿದ್ದಾರೆ.
ನಟ ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್, ಗೀತಾ, ಮಂಗಳಾ, ಅಶ್ವಿನಿ, ಸೋದರಿಯರಾದ ಲಕ್ಷ್ಮೀ, ಪೂರ್ಣಿಮಾ, ಮಾವ ಚಿನ್ನೇಗೌಡ್ರು, ಪುನೀತ್ ಪುತ್ರಿ ವಂದಿತಾ ಸೇರಿದಂತೆ ಡಾ. ರಾಜ್ ಕುಮಾರ್ ಕುಟುಂಬದಸ್ಥರು ಭಾಗಿಯಾಗಿದ್ದಾರೆ.