ಮನರಂಜನೆ

ಪುನೀತ್ ಪುಣ್ಯಸ್ಮರಣೆ: ಶಿವಣ್ಣ ರಕ್ತದಾನ

ಪುನೀತ್ ಪುಣ್ಯಸ್ಮರಣೆ: ಶಿವಣ್ಣ ರಕ್ತದಾನ

  ಬೆಂಗಳೂರು,ನ.09  ನಟ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಸೋದರ ಶಿವರಾಜ್ ಕುಮಾರ್ ರಕ್ತದಾನ ಮಾಡುವ ಮೂಲಕ ಅಗಲಿದ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
 
ಅನ್ನ ಸಂತರ್ಪಣೆಗೆ ಅಪ್ಪು ಪತ್ನಿ ಅಶ್ವಿನಿ ಚಾಲನೆ ನೀಡಿದ ಬಳಿಕ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸಹ ಅಭಿಮಾನಿಗಳಿಗೆ ಊಟ ಬಡಿಸಿದರು.
 
ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಅಭಿಮಾನಿಗಳಿಗೆ ಊಟ ಹಾಕಬೇಕು ಅನ್ನೋ  ಆಸೆ ಅಪ್ಪುಗೆ ಇತ್ತು. ಆದ್ರೆ ಆಸೆ ಈ ರೀತಿ ನೆರವೇರುತ್ತಿರೋದಕ್ಕೆ ನೋವಾಗುತ್ತಿದೆ. ಅಭಿಮಾನಿಗಳಿಂದಲೇ ನಾವು ಇಲ್ಲಿದ್ದೇವೆ. ಅಭಿಮಾನಿಗಳು ನೀಡಿದ್ದರಿಂದಲೇ ಈ ಹಂತದಲ್ಲಿದ್ದೇವೆ. ನಾವು ಬಲಗೈಲಿ ಮಾಡಿದ ಕೆಲಸ ನಮ್ಮ ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಅದೇ ರೀತಿ ಅಪ್ಪು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಎಲ್ಲ ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಯಾರಿಗೂ ನಿರಾಸೆ ಮಾಡಲ್ಲ. ಎಷ್ಟೋ ಸಾಧ್ಯವಾಗುತ್ತೋ ಅಷ್ಟು ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.  ನಂತರ ರಕ್ತದಾನ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಸುದ್ದಿ ಓದಿ