ತಾಳಿಕೋಟಿ

ಮುರಾಳ ಪರಿವಾರದ ಜನಸೇವೆ ಶ್ಲಾಘನೀಯ: ಡಾ. ಹುಕ್ಕೇರಿ

ಮುರಾಳ ಪರಿವಾರದ ಜನಸೇವೆ ಶ್ಲಾಘನೀಯ: ಡಾ. ಹುಕ್ಕೇರಿ

ತಾಳಿಕೋಟಿ 16: ಜನರ ಸೇವೆಯಲ್ಲಿ ಯಾವುದೇ ರೀತಿಯ ಜಾತಿ-ಭೇದವನ್ನು ಮಾಡದೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಮುರಾಳ ಪರಿವಾರದವರ ಕಾರ್ಯ ಶ್ಲಾಘನೀಯವಾಗಿದೆ ಎಂದು ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಹೇಳಿದರು. 

ರವಿವಾರ ಪಟ್ಟಣದಲ್ಲಿ ದಿ. ಅಬ್ದುಲ್‌ರಜಾಕ್‌ಸಾಬ ಮುರಾಳ ಮತ್ತು ದಿ. ಮಹ್ಮದಶಫೀಕ ಮುರಾಳ ಇವರ ಸ್ಮರಣಾರ್ಥ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ವಿಜಯಪುರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಹಾಗೂ ಬ್ಲಡ್ ಶುಗರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಖ್ಯಾತ ಯುವ ವೈದ್ಯ ಡಾಽಽ ಎ.ಎ. ನಾಲಬಂದ ಮಾತನಾಡಿ ರಕ್ತದಾನದಿಂದ ಮನುಕುಲ ಉಳಿಯಲಿಕ್ಕೆ ಸಾಧ್ಯವಿದೆ. ರಕ್ತದಾನದಿಂದ ಆರೋಗ್ಯವೃದ್ಧಿಯಾಗುತ್ತದೆ. ನಮ್ಮ ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದರು. 

ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಮುಸ್ಲೀಂ ಧಾರ್ಮಿಕ ಮುಖಂಡ ಸೈಯದ್ ಶಕೀಲಅಹ್ಮದ್ ಖಾಜಿ ಅವರು ರಕ್ತ ಮನುಷ್ಯನ ದೇಹದ ಅತ್ಯಮೂಲ್ಯ ಘಟಕವಾಗಿದೆ. ಅದನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಿಲ್ಲ ಅದನ್ನು ವ್ಯಕ್ತಿಯಿಂದಲೇ ಪಡೆಯಬೇಕು ಇದೊಂದು ಪುಣ್ಯದ ಕಾರ್ಯವಾಗಿದೆ ಎಂದರು. ಸಾಹಿಲ್ ಮಹಮ್ಮದ ಶಫೀಕ್ ಮುರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 

ವೇದಿಕೆಯಲ್ಲಿ ಮೌಲಾನಾ ಮುಜೀಬುರಹ್ಮಾನ ಉಮರಿ, ಹಸಿರು ಸಂಪದ ಬಳಗದ ಅಧ್ಯಕ್ಷ ಡಾಽಽ ವಿಜಯಕುಮಾರ ಕಾರ್ಚಿ, ಖ್ಯಾತ ವೈದ್ಯೆ ಡಾಽಽ ಶ್ರೀಮತಿ ಗಂಗಾಂಬಿಕಾ ಹುಕ್ಕೇರಿ,  ಗಣ್ಯರಾದ ಸಜ್ಜನ್, ಬಾಳು ಬಕ್ಷಿ ದಾದಾ, ಪತ್ರಕರ್ತ ಜಿ.ಟಿ. ಘೋರೆ​‍್ಡ, ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜಯಸಿಂಗ್ ಮೂಲಿಮನಿ, ಬಿಜೆಪಿ ನಗರ ಘಟಕ ಅಧ್ಯಕ್ಷ ರಾಘು ಚವ್ಹಾಣ, ಇರಾಜ್ ಸರ್, ರಫೀಕ್ ಮುರಾಳ, ಎಸ್‌.ಎಸ್‌. ಗಡೇದ, ಶಫೀಕ ಇನಾಮದಾರ, ಮಹಾಂತೇಶ ಮುರಾಳ, ಅಲ್ಲಾಭಕ್ಷಸಾಬ ನಮಾಜಕಟ್ಟಿ, ಸಾಹಿಲ್ ಮುರಾಳ, ಆರೀಫ ಮುರಾಳ, ಮೋದಿನಸಾ ನಗಾರ್ಚಿ, ದಾವಲ ಮುರಾಳ, ಲಾಳೇಮಶ್ಯಾಕ ಮುರಾಳ, ವಿಜಯಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ