ಚಿಕ್ಕೋಡಿ

ಸಾರ್ವಜನಿಕರ ಸಮಸ್ಯೆ ಆಲಿಕೆ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ; ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಪ್ರಕಾಶ ಹುಕ್ಕೇರಿ

ಸಾರ್ವಜನಿಕರ ಸಮಸ್ಯೆ ಆಲಿಕೆ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ; ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಪ್ರಕಾಶ ಹುಕ್ಕೇರಿ

ಲೋಕದರ್ಶನ ವರದಿ 


ಚಿಕ್ಕೋಡಿ: ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಅಭಿವೃದ್ಧಿಗಾಗಿ ಮೊದಲ ಹಂತವಾಗಿ 4.53 ಕೋಟಿ ರೂ ಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಆಲಿಸಿ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. 

ಮಂಗಳವಾರ ಚಿಕ್ಕೋಡಿ ನಗರದ ಬಸವೇಶ್ವರ ನಗರ, ಅಂಬೇಡ್ಕರ ನಗರ, ಭೀಮನಗರ ಮತ್ತು ರಾಮನಗರಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಆಲಿಸಿ ಸರ್ಕಾರದಿಂದ ಮಂಜೂರಾದ ಅನುದಾನದ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಈಗ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಶಿಘ್ರವಾಗಿ ಮುಕ್ತಾಯವಾಗಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಚಿಕ್ಕೋಡಿ ನಗರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುತ್ತದೆ ಎಂದರು. 

ಪಟ್ಟಣದ ಭೀಮನಗರ ಹಾಗೂ ಇಂದಿರಾನಗರದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ರಸ್ತೆ, ಚರಂಡಿ ಹಾಗೂ ಕೂಡುವ ರಸ್ತೆ ಕಾಮಗಾರಿಗೆ 1.20 ಕೋಟಿ ರೂ, ನಗರದ ರಾಮನಗರ, ಮಾತಂಗಕೇರಿ, ಸಂಜಯ ನಗರ ಪರಿಶಿಷ್ಟ ಕಾಲೋನಿಗಳಲ್ಲಿ ರಸ್ತೆ ಸುಧಾರಣೆಗೆ 90 ಲಕ್ಷ ರೂ, ಂಬೇಡ್ಕರ ನಗರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ, ಮರಗೂಬಾಯಿ ದೇವಸ್ಥಾನ ಜೀರ್ಣೋದ್ದಾರಕ್ಕೆ 10 ಲಕ್ಷ ರೂ, ಯಾಧವ ಸಮಾಜದ ಕೃಷ್ಣ ಭವನಕ್ಕೆ 20 ಲಕ್ಷ ರೂ, ಭೀಮನಗರದ 2 ಪ್ರಾಥಮಿಕ ಶಾಲಾ ಕೋಠಡಿ ನಿರ್ಮಾಣಕ್ಕೆ 26 ಲಕ್ಷ ರೂ, ವೇಂಕಟೇಶ್ವರ ನಗರದ ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ 27 ಲಕ್ಷ ರೂ, ಸರ್ಕಾರಿ ಪದವಿ ಪೂರ್ವ ಕಾಲೇಜಿನ 3 ಕೊಠಡಿ ನಿರ್ಮಾಣಕ್ಕೆ 60 ಲಕ್ಷ ರೂ ಹೀಗೆ ಒಟ್ಟು 4.53 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಾ ಮಾನೆ, ಪುರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಕೋರೆ, ಚಿದಾನಂದ ನೊಗನಿಹಾಳ, ಶೀಥಲ ಮುಂಡೆ, ಗಣೇಶ ಮೋಹಿತೆ, ವಿನೋಧ ಮಾಳಗೆ,  ಬಾಳಪ್ಪ ನಾಯಿಕ, ಸಿದ್ರಾಮ ಮುಂಡೆ, ದುಂಡಪ್ಪ ಬಾಡಕರ, ಮಹಾದೇವ ಕರೋಲೆ, ಸದಾಶಿವ ನಾಯಿಕ, ಪಾಂಡುರಂಗ ನಾಯಿಕ, ಮನೋಜ ಶಿರಗಾಂವೆ, ಅಜೀತ ಪಾಟೀಲ, ಪಿರೋಜ ಕಲಾವಂತ ಮುಂತಾದವರು ಇದ್ದರು. 


ಸುದ್ದಿ ಓದಿ