ಆರೋಗ್ಯ ಅಭಿಯಾನದ ಜನ ಜಾಗೃತಿ ಕಾರ್ಯಕ್ರಮ
Public awareness program on health campaign
ಬಳ್ಳಾರಿ 31 : ತಾಲೂಕಿನ ಬಿ ಬೆಳಗಲ್ ತಾಂಡದಲ್ಲಿ ಹಮ್ಮಿಕೊಂಡಿದ ಕಾರ್ಯಕ್ರಮ, ಕರ್ನಾಟಕ ಸರ್ಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, 2025 /26 ನೇ ಸಾಲಿನ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಬಳ್ಳಾರಿ ಇವರ ಮೂಲಕ, ಚಿಗುರು ಕಲಾತಂಡ ಇಬ್ರಾಹಿಂಪುರ್ ಬಳ್ಳಾರಿ, ಸಂಯೋಗದೊಂದಿಗೆ, ಆರೋಗ್ಯ ಅಭಿಯಾನದಡಿಯ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಡಿ. 30ರಂದು ಜಾನಪದ ಕಲಾ ಪ್ರದರ್ಶನ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮುದಾಯ ಆರೋಗ್ಯ ಅಧಿಕಾರಿಗಳಾದ ಡಾ. ರವಿಕುಮಾರ್ ಆಶಾ ರಾಣಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲೆಯ ಗುರುಗಳು, ಊರಿನ ಗುರಿ ಹಿರಿಯರು ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಕೊಟ್ಟರು.
ಇದೇ ವೇಳೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಾತನಾಡಿ, ಇಂಥಹ ಅನೇಕ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ನೆರವೇರಿಸಬೇಕು, ಹಾಗೆನೆ ಚಿಗುರು ಕಲಾ ತಂಡದವರು ಅನೇಕ ಮಾಹಾಮಾರಿ ರೋಗಗಳ ಬಗ್ಗೆ ಹೆರಿಗೆ ತಾಯಂದಿರ ಬಗ್ಗೆ, ಗರ್ಭಿಣಿ ತಾಯಂದಿರ ಬಗ್ಗೆ, ತಾಯಿ ಕಾರ್ಡ್ ಬಗ್ಗೆ, ಕ್ಷಯ ರೋಗದ ಬಗ್ಗೆ, ತಾಯಿ ಮತ್ತು ಮಗುವಿನ ಬಗ್ಗೆ, ಕುಷ್ಟರೋಗದ ಬಗ್ಗೆ, ರಕ್ತ ಹೀನತೆ ಬಗ್ಗೆ, ತಾಯಿ ಎದೆ ಹಾಲಿನ ಬಗ್ಗೆ, ಬ್ರೂಣ ಹತ್ಯದ ಬಗ್ಗೆ, ಆಂಬುಲೆನ್ಸ್ ಬಗ್ಗೆ, ಹದಿಹರಿಯದವರ ಸಮಸ್ಯೆಗಳು ಕುರಿತು, ಲಸಿಕೆಗಳ ಕುರಿತು, ಇನ್ನು ಅನೇಕ ವಿಷಯಗಳು ಕುರಿತು ಕಲಾವಿದರು ಅಭಿನಯದ ಮೂಲಕ ಜಾಗೃತಿ ಗೀತೆಗಳ ಮೂಲಕ ಜನರಿಗೆ ಅರಿವು ಮೂಡಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆಶಾರಾಣಿ, ಆಶಾ ಕಾರ್ಯಕರ್ತರಾದ ಲಲಿತ ಬಾಯಿ, ತಿಪ್ಪಮ್ಮ, ಪಾರುಬಾಯಿ, ವಸಂತ ಬಾಯಿ ಜ್ಯೋತಿಬಾಯಿ ಗ್ರಾಮದ ಹಿರಿಯರಾದ ಲಚ್ಚನಾಯಕ ಮಂಜುನಾಥ್ ನಾಯಕ ಶಿವನಾಯಕ್ ಮೇಘನಾಯಕ್, ಅಂಗನವಾಡಿ ಕಾರ್ಯಕರ್ತರು, ಶಾಲೆಯ ಗುರುಗಳು, ಗ್ರಾಮದ ಗುರುಹಿರಿಯರು ಶಾಲಾ ಮಕ್ಕಳು, ಕಲಾವಿದರಗಳಾದ ಎಚ್ ರಮೇಶ್, ಹೆಚ್,ಜಿ, ಸುಂಕಪ್ಪ , ಎರಿಸ್ವಾಮಿ, ಸೈಪುಲ್ಲ, ವೆಂಕಟೇಶ್, ಸರ್ವ ಮಂಗಳಮ್ಮ, ದಿವ್ಯ ಇನ್ನು ಅನೇಕ ಊರಿನ ಜನರು ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು, ನಂತರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಎಸ್‌ಎಂ ಹುಲುಗಪ್ಪರವರು ತಿಳಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 