ರಾಣೆಬೆನ್ನೂರ

ಡೆಂಗ್ಯೂ ಭೀತಿ ಸ್ವಚ್ಛತೆಗಿಲ್ಲ ನೀತಿಆರೋಗ್ಯ ಕೇಂದ್ರದಿಂದ ಜನ ಜಾಗೃತಿ

ಡೆಂಗ್ಯೂ ಭೀತಿ ಸ್ವಚ್ಛತೆಗಿಲ್ಲ ನೀತಿಆರೋಗ್ಯ ಕೇಂದ್ರದಿಂದ ಜನ ಜಾಗೃತಿ

ರಾಣೇಬೆನ್ನೂರು : ಸೆ 28 ಹಲವಾರು ಡೆಂಗ್ಯೂ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು ಅಗಸ್ಟ್‌ ತಿಂಗಳೊಂದರಲ್ಲೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 5  ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ನಿಂತ ಕೊಳಚೆ ನೀರಿನಲ್ಲಿ ಉದ್ಭವವಾಗುವ ಈಡೀಸ್ ಸೊಳ್ಳೆಗಳಿಂದ ಡೆಂಗ್ಯೂ ವೇಗವಾಗಿ ಹಬ್ಬುವ ಸಾಂಕ್ರಾಮಿಕ ರೋಗವಾಗಿದ್ದು ನಗರ ಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಮತ್ತು ಸೂಕ್ತ ತ್ಯಾಜ್ಯ ವಿಲೇವಾರಿ ಮಾಡದೇ ಇರುವುದರಿಂದ ಇಕ್ಕಟ್ಟಾದ ಓಣಿಗಳು ಹಾಗೂ ಸ್ಲಂ ನಂತಹ ನಿವಾಸಿ ಸ್ಥಾನಗಳು ಡೆಂಗ್ಯೂ ಚಿಕನ್ ಗುನ್ಯಾ ಮಲೇರಿಯಾದಂತಹ ಮಹಾಮಾರಿ ರೋಗಗಳ ವಾಸಸ್ಥಾನವಾಗಿ ಪರಿವರ್ತಿತವಾಗುತ್ತಿವೆ.  

ಕಳೆದ ತಿಂಗಳು ರಾಣೇಬೆನ್ನೂರು ನಗರಸಭೆ ವ್ಯಾಪ್ತಿಯ ಸಂಗಮೇಶ್ವರ ನಗರ ಮತ್ತು ಚೋಳಮರಡೇಶ್ವರ ನಗರದಲ್ಲಿ ಎರಡು ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿದ್ದು ಹೊನ್ನತ್ತಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗುಡುಗೂರು ಗ್ರಾಮ ಪಂಚಾಯಿತಿಯ ಚನ್ನಾಪುರ ತಾಂಡಾ, ಮಾಕನೂರು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೊಡಿಯಾಲ್ ಗ್ರಾಮ ಮತ್ತು ತುಮ್ಮಿನಕಟ್ಟಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಹೊಳೆ ಆನ್ವೇರಿ ಗ್ರಾಮದಲ್ಲಿ ತಲಾ ಒಂದೊಂದು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಮೆಡ್ಲೇರಿಯಲ್ಲಿ ಇತ್ತೀಚೆಗೆ ಡೆಂಗ್ಯೂವಿನಿಂದ ಮಗುವೊಂದು ಮೃತ ಪಟ್ಟ ಪ್ರಕರಣ ದಾಖಲಾಗಿದೆ ಗ್ರಾಮಗಳಲ್ಲಿ ಸರಿಯಾದ ಕಾಲುವೆಗಳ ವ್ಯವಸ್ಥೆ ಇಲ್ಲದಿರುವುದು ಮತ್ತು ಮನೆಗಳ ಶೌಚಾಲಯದ ನೀರು ರಸ್ತೆಗಳಲ್ಲೆ ನಿಲ್ಲುವುದರಿಂದ ಕೊಳಚೆ ನೀರಿನಲ್ಲಿ ಉದ್ಭವವಾಗುವ ಲಾರ್ವಾಗಳಿಂದ ಈಡೀಸ್ ಸೊಳ್ಳೆ ಉತ್ಪತ್ತಿಯಾಗಿ ಈ ಪ್ರದೇಶದಲ್ಲಿ ಡೆಂಗ್ಯೂನಂತಹ ರೋಗ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿವೆ ಇದರ ಅಂಗವಾಗಿ ಬುಧವಾರ ಮೆಡ್ಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮಲೇರಿಯಾ ಚಿಕನ್ ಗುನ್ಯಾ ಮತ್ತು ಡೆಂಗ್ಯೂ ಸಾಂಕ್ರಾಮಿಕ ರೋಗಗಳ ಕುರಿತು ಜನ ಜಾಗೃತಿ ಜಾಥಾ ಮೂಲಕ ಜನರಲ್ಲಿ ಈ ರೋಗಗಳ ಹಬ್ಬುವಿಕೆ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಜಾಥಾದಲ್ಲಿ ಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಇಂದುಧರ, ಮಾಲತೇಶ ಕಡೇಮನಿ, ನಾಗರಾಜ ಜಿ ಕೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೀರಣ್ಣ ತಳವಾರ, ಸಿಬ್ಬಂದಿ ಮಂಜು ಜಾಗಟಿ, ಶೀವೂ ಗುತ್ಯಾಳರ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು   

ಡೆಂಗ್ಯೂ ಪತ್ತೆಯಾದ ರೋಗಿಗಳ ಮನೆಗಳಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದೇವೆ ರೋಗಿಗಳ ಮನೆಯವರಿಗೆ ಸೊಂಕು ತಗುಲಿರುವುದಿಲ್ಲ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆಡಾ ರಾಜೇಶ್ವರಿ.  

ಹಿರಿಯ ತಾಲೂಕಾ ಆರೋಗ್ಯಾಧಿಕಾರಿ. 


ಸುದ್ದಿ ಓದಿ