ಬಳ್ಳಾರಿ

ರೂಪನಗುಡಿ ಗ್ರಾಮದ ಭಾಗಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ: ಯು. ಯಾರ್ರಿಸ್ವಾಮಿ

ರೂಪನಗುಡಿ ಗ್ರಾಮದ ಭಾಗಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ: ಯು. ಯಾರ್ರಿಸ್ವಾಮಿ
ಬಳ್ಳಾರಿ:ಜು(20)ರಂದು ರೂಪನಗುಡಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ,ಬಸ್ ವ್ಯವಸ್ಥೆ ಕಲ್ಪಿಸುವಂತೆ ಭಾರತ ಪ್ರಜಾಸತ್ತಾತ್ಮಾಕ ಯುವಜನ ಫೇಡರೇಷನ್ ಬಳ್ಳಾರಿ ಜಿಲ್ಲಾ ಕಲ್ಯಾಣ ಕರ್ನಾಟಕ ಸಾರಿಗೆ ಅಧಿಕಾರಿಗೆ ಗುರುವಾರ ಮನವಿ ಪತ್ರ  ಸಲ್ಲಿಸಿದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಯು. ಯಾರ್ರಿಸ್ವಾಮಿ  ಮಾತನಾಡಿ ರೂಪನಗುಡಿ ಗ್ರಾಮಕ್ಕೆ ಸುಮಾರು ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದಿರುವದು ಬಹಳ ನೋವಿನ ಸಂಗತಿಯಾಗಿದೆ.  ಗ್ರಾಮದಲ್ಲಿ ಸರಿಸುಮಾರು ಐದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು ಈ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಹಾಗೂ ಇಲ್ಲಿನ ವಿದ್ಯಾರ್ಥಿಗಳು ಶಾಲಾ ಕಾಲೇಜ್ ಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ. ದಿನನಿತ್ಯ ಬಸ್ಸಿಗಾಗಿ ಗಂಟೆ ಗಟ್ಟಲೆ ರೋಡ್ ನಲ್ಲಿ ನಿಂತು  ಸುಸ್ತಾಗಿ  ಬೇಸತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ  ಶಾಪ ಹಾಕುತ್ತಿದ್ದಾರೆ  ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಳ್ಳಾರಿಯ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ  ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತದೇ ಆದಷ್ಟು ಬೇಗ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು. ಶಂಕರ್ ಬಂಡೆ ದನಲಕ್ಷ್ಮಿ ಕ್ಯಾಂಪ್ ತಿರುಮಲ ನಗರ ಕ್ಯಾಂಪ್ ವಿಘ್ನೇಶ್ವರ ಕ್ಯಾಂಪ್ ಇಂಬ್ರಾಪುರ ಬಬ್ ಕುಂಟೆ ಬೂದಾಳ್ ಕಮ್ಮಾರಚೇಡ್ ಕುಂಟನಾಳ್ ಯಾಲ್ಪಿ  ಈ ಎಲ್ಲಾ ಹಳ್ಳಿಗಳಿಂದ ಬರುವ ಶಾಲಾ ವಿದ್ಯಾರ್ಥಿಗಳು ಮಹಿಳೆಯರು ಆಸ್ಪತ್ರೆಗೆ ಬರುವ ಬಡಜನರಿಗೆ ರೋಗಿಗಳಿಗೆ ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ  ಟೀಚರ್ ಗಳಿಗೆ.
ಈ ಭಾಗದ ಸುತ್ತಮುತ್ತಲಿನ  ಹಳ್ಳಿಗಳ ಸಾರ್ವಜನಿಕರಿಗೆ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ನ ವ್ಯವಸ್ಥೆ ಇಲ್ಲದಿರುವುದರಿಂದ ದಿನನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಈ ಸಂದರ್ಭದಲ್ಲಿ, ಹನುಮಪ್ಪ ,ಪಿ ಲೋಕೇಶ್, ಕಾರೇಕಲ್  ಹೊನ್ನೂರ್ ಸಾಬ್, ಬಿಪಿ ನವೀನ್ ಕುಮಾರ್, ಎ.ತಿಪ್ಪೇರುದ್ರ ,ಜಿ ಎನ್  ಎರ್ರಿಸ್ವಾಮಿ, ಗೋಟುರ್ ವೆಂಕಟೇಶ್ ,ಹೇಚ್. ಎರ್ರಿಸ್ವಾಮಿ,  ರೂಪನಗುಡಿ ಬಿ ರಾಮಾಂಜನೇಯ, ಹೇಚ್,ರಾಮಾಂಜನಿ ರೂಪನಗುಡಿ ನಿಂಗಪ್ಪ, ಅಂಜಿನಿ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ