ರಾಣೆಬೆನ್ನೂರ

ಮಾಕನೂರಿನಲ್ಲಿ ರೈತರಿಂದ ಪ್ರತಿಭಟನೆ ಮುಂದುವರಿಕೆ

ಮಾಕನೂರಿನಲ್ಲಿ ರೈತರಿಂದ ಪ್ರತಿಭಟನೆ ಮುಂದುವರಿಕೆ


ಲೋಕದರ್ಶನ ವರದಿ 

ರಾಣೇಬೆನ್ನೂರು 25:  ಯೂನಿಯನ್ ಬ್ಯಾಂಕ್‌ಆಫ್‌ಇಂಡಿಯಾದವರರೈತ ವಿರೋಧಿ ನೀತಿ ಖಂಡಿಸಿಉತ್ತರಕರ್ನಾಟಕದ ಹೆಬ್ಬಾಗಿಲು ಮಾಕನೂರುಕ್ರಾಸ್‌ನಲ್ಲಿರಾಷ್ಟ್ರೀಯ ಹೆದ್ದಾರಿತಡೆ ಮಾಡಿರೈತರು ಪ್ರತಿಭಟಿಸಿದರು.  ನಂತರಮರೆವಣಿಗೆ ಮೂಲಕ ಮಾಕನೂರ ವರೆಗೆ ತೆರಳಿ ಅಲ್ಲಿಯೂನಿಯನ್ ಬ್ಯಾಂಕ್‌ಆಫ್‌ಇಂಡಿಯಾ ಶಾಖಾ ಮುಂದೆ ಸಾವಿರಾರುರೈತರೊಂದಿಗೆ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಸ್ಥಳಕ್ಕೆ ದೀಡೀರನೆ ಆಗಮಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮತ್ತು ಎಸ್‌.ಪಿ. ಹನಮಂತರಾಯ, ಅಡಿಶನಲ್‌ಎಸ್‌.ಪಿ. ಸಂತೋಷ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಡಾ.ರವೀಂದ್ರ ಪ್ರಭು ಅವರು ಆಗಮಿಸಿದ್ದರು. 

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚೆರ್ಚೆ ಮಾಡಿ ಶೀಘ್ರ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. ಡಿವೈಎಸ್‌ಪಿ. ಸುರೇಶ ಟಿ.ವಿ. ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಿದ್ದರು. ಈ ಸಂದರ್ಭದಲಿ ್ಲರೈತ ಮುಖಂಡ ರವೀಂದ್ರಗೌಡ.ಎಫ್‌.ಪಾಟೀಲ ಮಾತನಾಡಿ ಸಮಸ್ಯೆ ಬಗೆ ಹರಿಯುವತನಕ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಯುವುದೆಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಹಲಗೇರಿ, ಎಸ್‌.ಡಿ. ಹಿರೇಮಠ, ಹರಿಹರಗೌಡ ಪಾಟೀಲ, ಚಂದ್ರಣ್ಣ ಬೇಡರ, ರಮೇಶ ಪೂಜಾರ, ಸುಭಾಸಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ ಸೇರಿದಂತೆ ಅನೇಕ ಗಣ್ಯರು, ಬ್ಯಾಂಕಿನಿಂದ ಅನ್ಯಾಯಕ್ಕೆ ಒಳಗಾದ ನೂರಾರು ರೈತರು ಭಾಗವಹಿಸಿದ್ದರು. 


ಸುದ್ದಿ ಓದಿ