ಹೊಸಪೇಟೆ

ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಹೊಸಪೇಟೆ 18: ವಿಜಯನಗರ ಕ್ಷೇತ್ರದಲ್ಲಿ ಕೆಪಿಸಿಸಿ. ರಾಜ್ಯ   ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪ ಅಮರನಾಥರವರ ನೇತೃತ್ವದಲ್ಲಿ ಹೊಸಪೇಟೆಯ ನಗರದ ಗಾಂಧಿ ಚೌಕನಿಂದ ತಹಶಿಲ್ದಾರರ  ಕಚೇರಿಯವರೆಗೆ ಕಾಲ್ನಡಿಗೆ ಮುಖಾಂತರವಾಗಿ ಗ್ಯಾಸ್ ಬೆಲೆ ಎರಿಕೆ ಹಾಗೂ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.  

ನಂತರ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್‌. ಎನ್‌. ಮೊಹಮ್ಮದ್ ಇಮಾಮ್ ನಿಯಾಜಿರವರು ಗಾಂಧಿ ಪ್ರತಿಮೆಗೆ ಮಾಲಾರೆ​‍್ಣ ಮಾಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ತಹಶಿಲ್ದಾರರ ಕಚೇರಿಗೆ ಆಗಮಿಸಿದ ನಂತರ ಬೆಲೆ ಎರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಸನ್ಮಾನ್ಯ ಸ್ಮೃತಿ ಇರಾನಿಯವರು ಕೇವಲ 300ರೂಪಾಯಿ ಸಿಲೆಂಡರ ಬೆಲೆ ಇದ್ದಾಗ ಬೀದಿಗಿಳಿದು ರಂಪಾಟ ಮಾಡಿದವರು ಇಂದು 974 ರೂಪಾಯಿಯಾಗಿದ್ದರು ಮೌನ ವಹಿಸಿರುವುದು ನಾಚಿಕೆ ಪಡುವ ಸಂಗತಿಯಾಗಿದೆ ಎಂದು ಹಿಯಾಳಿಸಿದರು. ಕಾಂಗ್ರೆಸ್ ಪಕ್ಷ ಇತಿಹಾಸವಿರುವ ಪಕ್ಷವಾಗಿದ್ದು ಇದು ಬಡವರ ದೀನ ದಲಿತರ, ಕೂಲಿ ಕಾರ್ಮಿಕರ, ಕೃಷಿ ಕಾರ್ಮಿಕರ ಅಭಿವೃದ್ಧಿಗಾಗಿ ಸತತ ಶ್ರಮಿಸುತ್ತಾ ಬಂದಿದೆ. ಆದರೆ ಇಂದು ಬಿ.ಜೆ.ಪಿ ಪಕ್ಷ ಕೇವಲ ಉದ್ಯಮಿಗಳ ಪರವಾಗಿದ್ದು ಯಾವುದೇ ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತರದೇ ದಿನಸಿ ವಸ್ತುಗಳ, ಆಹಾರ ಧಾನ್ಯಗಳು, ಪೆಟ್ರೋಲ್, ಡೀಸಲ್, ಗ್ಯಾಸ್ ಸಿಲೆಂಡರ್ ಪ್ರತಿಯೊಂದು ಬೆಲೆಗಳನ್ನು ಏರಿಸುತ್ತಾ ಹಾಗು ಎಲ್ಲಾ ಸರಕಾರಿ ಸಂಸ್ಥೆಗಳನ್ನು ಅಂಬಾನಿ ಅದಾನಿ ಕಂಪನಿಗಳಿಗೆ ಮಾರಾಟ ಮಾಡುತ್ತಾ ದೇಶವನ್ನು ಅಧೊಗತಿಗೆ ತಂದಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಬಿ.ಜೆ.ಪಿ ಪಕ್ಷದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು. 

ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಆಶಲತಾ, ಗುಜ್ಜಲ್ ರಘು, ದೀಪಕ್ ಸಿಂಗ್, ಎಲ್‌. ತೇಜಾನಾಯ್ಕ್‌, ಮುನ್ನಿ ಖಾಸಿಂ ರವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಬಾನು ಬಿ, ರಂಗಮ್ಮ, ಗೀತಾ ತಿಮ್ಮಪ್ಪ, ಗೀತಾ ತಿಮ್ಮಪ್ಪ, ಇಂದುಮತಿ, ಗಂಗಮ್ಮ, ಕೆ. ಮಂಜುಳಾ, ಪಲ್ಲವಿ, ಮಹಾಂಕಾಳಮ್ಮ, ಗೌಸಿಯಾ, ಅಮೀನಾ ಬಿ, ನಾಗುಬಾಯಿ, ನವಾಜ್, ಅಣ್ಣಮಲೈ, ಗಣೇಶ್, ಬುಡೇನ್, ಹಾಗೂ  ಮುಂಚೂಣಿ ಘಟಕದವರು, ಹಾಗೂ ಕಾರ್ಯಕರ್ತರು,  ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ