ನೀರಿಗಾಗಿ ಬೀದಿಗಿಳಿದು ಖಾಲಿ ಕೊಡಗಳೊಂದಿಗೆ ನೀರೆಯರ ಪ್ರತಿಭಟನೆ
ಸಮರ್ಪಕ ನೀರು ಪೂರೈಯಿಸದಿದ್ದರೆ ಚಿಕ್ಕೋಡಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಎಚ್ಚರಿಕೆ

ಚಿಕ್ಕೋಡಿ 08: ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಸಮರ್ಕ ನೀರು ಪೂರೈಯಿಸದಿದ್ದರೆ ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದಕ್ಕೆ ಆಸ್ಪದ ಕೊಡದೆ ಸಮರ್ಕ ನೀರು ಪೂರೈಕೆ ಮಾಡಬೇಕೆಂದು ಪುರಸಭೆ ಸದಸ್ಯರು ಮತ್ತು ನಾಗರಿಕರು ಖಾಲಿ ಕೊಡಗಳೊಂದಿಗೆ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ತಿಂಗಳಿಂದ ಚಿಕ್ಕೋಡಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ನಗರದ ಜನರಿಗೆ ನೀರು ಇಲ್ಲದೆ ಬಾರಿ ಸಮಸ್ಯೆ ಎದುರಾಗಿದೆ. ಆದರೂ ಅಧಿಕಾರಿಗಳು ಸಮರ್ಕ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಚಿಕ್ಕೋಡಿ ನಗರದ ರಾಮನಗರ, ಝಾರಿಗಲ್ಲಿ, ಇಂದಿರಾ ನಗರ, ಭೀಮನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ನಗರದ ಜನರಿಗೆ ಬಾರಿ ಸಂಕಷ್ಟ ಎದುರಾಗಿದೆ. ಸಮರ್ಕ ನೀರು ಪೂರೈಕೆ ಮಾಡಬೇಕೆಂದು ಪುರಸಭೆ ಸದಸ್ಯರು ಪ್ರತ್ಯೇಕ ಸಭೆ ನಡೆಸಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡಾ ಪ್ರಯೋಜನವಾಗುತ್ತಿಲ್ಲ, ಕೂಡಲೇ ಮೇಲಾಧಿಕಾರಿಗಳು ಚಿಕ್ಕೋಡಿ ನಗರದ ಕುಡಿಯುವ ನೀರಿನ ಕಡೆ ಗಮನ ಹರಿಸಿ ಸಮರ್ಕ ನೀರು ಕೊಡಬೇಕೆಂದು ಪ್ರತಿಭಟನಾಕಾರರು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಹಿರಿಯ ಸದಸ್ಯ ರಾಮಾ ಮಾನೆ ಮಾತನಾಡಿ, ಚಿಕ್ಕೋಡಿ ಪುರಸಭೆಯು 23 ವಾರ್ಡಗಳನ್ನು ಹೊಂದಿದೆ. ಸುಮಾರು 50 ಸಾವಿರ ಜನಸಂಖ್ಯೆ ಇರುತ್ತದೆ. ಸದ್ಯ ಎಲ್ಲ ವಾರ್ಡಗಳಲ್ಲಿ 8 ದಿನಕ್ಕೊಮ್ಮೆ ನೀರು ಪೂರೈಕೆಯಾಗುವುದರಿಂದ ನಗರದ ಜನರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಈಗ ಬಿಸಿಲಿನ ತಾಫವೂ ಬಹಳಷ್ಟು ಇರುವುದರಿಂದ ಸಾವ್ಜನಿಕರಿಗೆ ಸಮರ್ಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಗ್ರೆಡ್2 ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಮಾತನಾಡಿ, ಚಿಕ್ಕೋಡಿ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದು ಗಮನ ಬಂದಿದೆ. ಬರುವ ಎರಡು ದಿನಗಳ ಒಳಗಾಗಿ ಸಮರ್ಕ ನೀರು ಕೊಡಲಾಗುತ್ತದೆ. ಪುರಸಭೆಯಲ್ಲಿ ಇರುವ ನೀರಿನ ಸಮಸ್ಯೆ ಬಗೆಹರಿಸಲು ಉಪವಿಭಾಗಾದಿಕಾರಿ ಮಾಧವ ಗೀತ್ತೆ ಅವರ ಗಮನಕ್ಕೆ ತರಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗುಲಾಬ ಬಾಗವಾನ, ಇರರ್ಾನ ಬೇಪಾರಿ, ನ್ಯಾಯವಾದಿ ಮುದ್ದಸರ ಜಮಾದಾರ, ರವಿ ಹಂಪನ್ನವರ, ಪಿ.ಐ.ಕೋರೆ, ಅನೀಲ ಮಾನೆ, ಕಾಧರ ಕಮತೆ, ಬಾಬು ಸಮ್ಮತ್ತಶೆಟ್ಟಿ, ರಾಜು ಗುಲಗಂಜಿ, ರಾಜು ಬಾಲಪ್ಪಗೋಳ, ರಾಜು ಸೊಲ್ಲಾಪೂರೆ, ಪಿರೋಜ ಕಲಾವಂತ ಮುಂತಾದವರು ಇದ್ದರು.
ಚಿಕ್ಕೋಡಿ ನಗರದಲ್ಲಿ ನೀರಿನ ಸಮಸ್ಯೆ ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಕೆಲಸ ಮಾಡದ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ವಿವಿಧ ಕೆಲಸ ಕಾರ್ಯಗಳಿಗೆ ಬರುವ ನಾಗರಿಕರಿಂದ ಅಧಿಕಾರಿಗಳು ಹಣ ವಸೂಲಿ ಮಾಡುವ ಕೆಲಸ ನಿಲ್ಲಬೇಕು. ಜನರಿಗೆ ಸಮರ್ಕ ಮೂಲಭೂತ ಸೌಲಭ್ಯ ಒದಗಿಸಲು ಅಧಿಕಾರಿಗಳು ಮನಸ್ಸು ಮಾಡಬೇಕು.
ಸಾಭೀರ ಜಮಾದಾರ-ಪುರಸಭೆ ಸದಸ್ಯರು.
ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡುವ ಪಂಪಸೆಟ್ಗೆ ಶಾರ್ಟಸರ್ಕಿಟ್ ಆಗಿತ್ತು. ಇದರಿಂದ ನೀರು ಪೂರೈಕೆಯಲ್ಲಿ ವ್ಯತೆ ಕಂಡು ಬಂದಿದೆ. ಬರುವ ಎರಡು ದಿನಗಳ ಒಳಗಾಗಿ ಸಮರ್ಕ ನೀರು ಕೊಡಲಾಗುತ್ತದೆ. ಹೊಸ ಲೈನ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ.
ಮಹಾಂತೇಶ ನಿಡೋನಿ
ಮುಖ್ಯಾಧಿಕಾರಿಗಳು ಚಿಕ್ಕೋಡಿ