ರಾಣೆಬೆನ್ನೂರ

ಅಧಿಕಾರಿಯನ್ನು ವರ್ಗಾವಣೆ ಮಾಡದಿದ್ದರೇ, ಉಪವಾಸ ಸತ್ಯಾಗ್ರಹ

ಅಧಿಕಾರಿಯನ್ನು ವರ್ಗಾವಣೆ ಮಾಡದಿದ್ದರೇ, ಉಪವಾಸ ಸತ್ಯಾಗ್ರಹ

ರಾಣಿಬೆನ್ನೂರ 17:  ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಾ:ನ ಆರೇಮ ಲ್ಲಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವರ ಬೇಜವಾಬ್ದಾರಿ ಕಾರ್ಯದಿಂದಾಗಿ ಗ್ರಾಮವು ಅಭಿವೃದ್ಧಿಯಾಗದೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಈ ಅಧಿಕಾರಿಯನ್ನು ಕೂಡಲೇ ವರ್ಗಾವಣೆಗೊಳಿಸಿ  ವಜಾ ಗೊಳಿಸಬೇಕು ಇಲ್ಲವಾದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳ ಲಾಗುವುದೆಂದು ಗ್ರಾ ಪಂ ಸದಸ್ಯ ಹಾಗೂ ಶರಣಬಸ ವೇಶ್ವರ ಮಠದ ಪೀಠಾಧಿಪತಿ ಡಾಽ ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು. 

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, 2015ರಲ್ಲಿ ಅರೇಮಲ್ಲಾಪುರ ಗ್ರಾಪಂ.ಗೆ ಪಿಡಿಓ ಆಗಿ ಸೇವೆ ಸಲ್ಲಿಸಲು ಬಂದಿರುವ ಇವರು, ಇದುವ ರೆಗೂ ಹಗಣರದ ಸರಮಾಲೆ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇರಿಕೊಂಡಿವೆ.ಇದರ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಪಂ ಮತ್ತು ತಾಪಂ ಅಧಿಕಾರಿಗಳಿಗೆ ತಿಳಿಸಿ ದರೂ ಏನೂ ಪ್ರಯೋಜನವಾ ಗಿಲ್ಲ ಎಂದು ಆರೋಪಿಸಿದರು. 

ಇವರು ಈ ಗ್ರಾಮಕ್ಕೆ ಬಂದು ಹನ್ನೆರಡು ವರ್ಷಗಳಲ್ಲಿ 10 ಕೋಟಿ ರೂಗಳಿಗಿಂತ ಅಧಿಕ ಲೂಟಿಯಾಗಿದೆ. ಸಾಮಾನ್ಯ ಜನರಿಗೆ ತಲುಪಬೇಕಾದಂತಹ ಯೋಜನೆಗಳು ಸರಿಯಾಗಿ ತಲುಪದೆ ಹಣ ಸಹ ಬಿಡುಗಡೆ ಯಾಗಿಲ್ಲ. ಜಾನುವಾರುಗಳ ಮತ್ತು ಕುರಿಗಳ ಕೊಟ್ಟಿಗೆ ಕಟ್ಟಡ ಕ್ಕೂ ಸಹ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಸಾಕ ಷ್ಟು ಅವ್ಯವಹಾರವಾಗಿದೆ. ಈ ಬಗ್ಗೆ ಲಿಖಿತವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ ರೂ ಸಹ ಮೌನ ವಹಿಸಿರುವು ದು ಏಕೆ ಎಂಬ ಅನುಮಾನ ಕಾಡುತ್ತದೆಂದು ಪ್ರಶ್ನಿಸಿದರು. 

ಇಂತಹ ಅಧಿಕಾರಿ ಗಳಿದ್ದರೆ ಗ್ರಾಮವು ಅಬಿವೃದ್ಧಿ ಯಾಗಲು ಸಾಧ್ಯವಿಲ್ಲ ಕೂಡಲೇ ಇವರನ್ನು ಜು.20ರೊಳಗೆ ವರ್ಗಾವಣೆ ಮಾಡಿ ವಜಾಗೊಳಿಸಬೇಕು. ಇಲ್ಲವಾದಲ್ಲಿ  ಆಮರಣ ಉಪ ವಾಸ ಸತ್ಯಾಗ್ರಹವನ್ನು ಶರಣ ಬಸವೇಶ್ವರ ಮಠದಲ್ಲಿ ಕೈಗೊಳ್ಳು ವುದಾಗಿ ಶ್ರೀಗಳು ತಿಳಿಸಿದರು. ಯಲ್ಲಪ್ಪ ಸೂರ್ವೆ, ನಾಗರಾಜ ನಾಗರಜ್ಜಿ, ಶಶಿಧರ ಮಠದ, ಶಿವಣ್ಣ ಸಣ್ಣಬೊಮ್ಮಾ ಜಿ, ಮಂಜುನಾಥ ವಡ್ಡರ, ದೊಡ್ಡ ವೀರ​‍್ಪ ಚಿನಗುಡಿ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ