ಬೈಲಹೊಂಗಲ

2ಎ ಮೀಸಲಾತಿಗೆ ಸಿಪಾರಸ್ಸು ಮಾಡುವಂತೆ ಪಂಚಮಸಾಲಿ ಆಗ್ರಹ

2ಎ ಮೀಸಲಾತಿಗೆ ಸಿಪಾರಸ್ಸು ಮಾಡುವಂತೆ ಪಂಚಮಸಾಲಿ ಆಗ್ರಹ

ಬೈಲಹೊಂಗಲ,2- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ  ಹಾಗೂ ಕೇಂದ್ರ ಮೀಸಲಾತಿ ವಂಚಿತ ಲಿಂಗಾಯತ  ಬಡ ಸಮಾಜಗಳಿಗೆ ಕೇಂದ್ರ ಒಬಿಸಿಗೆ ಮೀಸಲಾತಿಗೆ ಸಿಪಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಘನವೆತ್ತ ರಾಜ್ಯಪಾಲರು ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಶಶಿಧರ ಬಗಲಿಯವರ ಮೂಲಕ ಬೈಲಹೊಂಗಲ ಪಂಚಮಸಾಲಿ ಘಟಕದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಮನವಿ ಅರ್ಪಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸುಮಾರು 86ಲಕ್ಷಕ್ಕಿಂತ ಹೆಚ್ಚಾಗಿರುವ ಸಮಾಜದ ಜನ ಕೃಷಿಯನ್ನೆ ಕುಲ ಕಸುಬನ್ನಾಗಿಸಿಕೊಂಡ, ಕೃಷಿ ಕೂಲಿಕಾರರಿಂದ ತುಂಬಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ , ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಪಂಚಮಸಾಲಿ ಜನಾಂಗ ಮುಖ್ಯವಾಹಿನಿಗೆ ಬರಲಾರದನ್ನು ಕಂಡು ಕಳೆದ 26 ವμರ್Àಗಳಿಂದಲೂ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಸಹ ಯಾವುದೇ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಅಕ್ರೊμÀ ವ್ಯಕ್ತಪಡಿಸಿದರು.

ರಾಜ್ಯ ಪಂಚಮಸಾಲಿ ಹಕ್ಕೊತ್ತಾಯ ಸಮೀತಿಯ ಅಧ್ಯಕ್ಷ  ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು 2012 ರಿಂದ 4 ಹಂತದ ವಿವಿಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದಾಗ

ಬೈಲಹೊಂಗಲ ನ್ಯಾಯವಾದಿಗಳ ಕ್ಷೇಮಾಭಿವೃದ್ಧಿ ಅಧ್ಯಕ್ಷ ಎಮ್.ವಾಯ್ ಸೋಮಣ್ಣವರ, ಜಿಪಂ ಸದಸ್ಯ ಶಂಕರ ಮಾಡಲಗಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಕೋಶಾಧ್ಯಕ್ಷ ಮುರಗೇಶ ಗೂಂಡ್ಲೂರ. ಸಮಾಜದ ಮುಖಂಡರಾದ ದುಂಡಪ್ಪ ಬೆಣಚಿನಮರಡಿ, ಶಿವಾನಂದ ಬೇಟಗೇರಿ, ಮಹಾಂತೇಶ ಗೂಂಡ್ಲೂರ, ಗೌಡಪ್ಪ ಪಾಟೀಲ, ಮಹೇಶ ಕೊಟಗಿ, ಆನಂದ ಮೂಗಿ, ರಾಜು ಹೊಸಟ್ಟಿ,  ಪುಟ್ಟು ಗುರಕನವರ, ವೀರೆಶ ಹಲಕಿ, ಶ್ರೀಶೈಲ ಶರಣಪ್ಪನವರ, ಸುಭಾμÀ ಚಪ್ಪಳಿ, ಚನಬಸ್ಸು ಈಟಿ, ಈಶ್ವರ ಬೊರಕನವರ, ಅಜೀತ ಕೊಟಗಿ, ಈರಣ್ಣ ರಾಯನಯ್ಕರ ಹಾಗೂ ಮುಂತಾದವರು ಇದ್ದರು.

ಸುದ್ದಿ ಓದಿ