ಬೆಳಗಾವಿ

30 ವರ್ಷಗಳಿಂದ ವಾಸವಿರುವ ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡುವಂತೆ ಪ್ರತಿಭಟನೆ

30 ವರ್ಷಗಳಿಂದ ವಾಸವಿರುವ ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡುವಂತೆ ಪ್ರತಿಭಟನೆ

ಬೆಳಗಾವಿ 04: ಸ್ಥಳೀಯ ಶಹಾಪುರದ ಆನಂದವಾಡಿ, ನೆಹರೂ ನಗರ ಮತ್ತು ಆಝಮ್ ನಗರದಲ್ಲಿ 253 ಪೌರ ಕಾರ್ಮಿಕರ ವಸತಿಗೃಹಗಳಲ್ಲಿ ಕಳೆದ 30 ವರ್ಷಗಳಿಂದ ವಾಸವಿರುವ ಕಾರ್ಮಿಕರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಸಫಾಯಿಕರ್ಮಚಾರಿ ಕಾವಲು ಸಮಿತಿ-ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ 2005ರಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಈಗಲಾದರೂ ಸರಕಾರ ತಕ್ಷಣ ವಸತಿಗೃಹಗಳಲ್ಲಿನ ಕಾರ್ಮಿಕರಿಗೆ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಆಗಸ್ಟ್‌ 15ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ,

ರಾಣಿ ಚನ್ನಮ್ಮನ ವೃತ್ತದಲ್ಲಿ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಅಲ್ಲದೇ 2020ರ ನವೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಮ್ಯಾನುವೆಲ್  ಗುರುತಿಸಲ್ಪಟ್ಟ 396 ಕುಟುಂಬಗಳಿಗೆ ವಿಶೇಷ ಸಮಿತಿ ರಚಿಸಿ, ಗುರುತಿನ ಚೀಟಿ ಕೊಡಬೇಕು. ಗೃಹಭಾಗ್ಯ ಯೋಜನೆಯಡಿ ಮೀಸಲಿಟ್ಟ 2 ಕೋಟಿ ರೂ. ಅನುದಾನದಲ್ಲಿ, ನಾಥಪೈ ವೃತ್ತದ ಬಳಿ ಪೌರ ಕಾರ್ಮಿಕರ ವಸತಿಗೃಹ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಬಳಿಕ ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಸಮಿತಿ ಅಧ್ಯಕ್ಷ ದೀಪಕ್ ವಾಘೇಲಾ, ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ, ವಿಜಯ ನೀರಗಟ್ಟಿ ಇತರರು ಇದ್ದರು. 


ಸುದ್ದಿ ಓದಿ