ಹೊಸಪೇಟೆ

ವಿದ್ಯುತ್ ಮಸೂದೆ 2020 ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ವಿದ್ಯುತ್ ಮಸೂದೆ 2020 ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ಹೊಸಪೇಟ 03: ಜನವಿರೋಧಿ, ರೈತ ವಿರೋಧಿ ಹಾಗೂ ವಿದ್ಯುತ್ ನೌಕರರಿಗೆ ಮರಣಶಾಸನವಾಗಿರುವ, ಕಾರ್ಮಿಕ ವಿರೋಧಿ ವಿದ್ಯುತ್ ಬಿಲ್ 2020 ರದ್ದು ಮಾಡಲು ಆಗ್ರಹಿಸಿ   ಆಲ್ ಇಂಡಿಯಾ ಪವರ್ ಮೆನ್ಸ್ ಫೆಡರೇಷನ್ ವತಿಯಿಂದ  ರಾಷ್ಟ್ರೀಯ ಪ್ರತಿಭಟನಾ ದಿನ ದ ಅಂಗವಾಗಿ ನವನಗರದ ಹೆಸ್ಕಾಂ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ, ಜಾಗತೀಕರಣ ಮತ್ತು ಖಾಸಗೀಕರಣದ ನೀತಿಗಳು ರೈಲ್ವೆ, ಬಿಎಸ್‍ಎನ್‍ಎಲ್ ಗಳಂತಹ ಸೇವಾ ವಲಯಗಳನ್ನು ಆವರಿಸಿಕೊಳ್ಳುತ್ತ, ಇದೀಗ ವಿದ್ಯುತ್ ವಲಯಕ್ಕೆ ಕಾಲಿಟ್ಟಿವೆ. ಕೇಂದ್ರ ಸರ್ಕಾರ ಒಂದೇ ಏಟಿಗೆ ಕಾಯ್ದೆಯ ಮೂಲಕ ಇಡೀ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. 

ಅಲ್ಲದೆ ಎರಡು ತಿಂಗಳಿಗೂ ಮೀರಿ, ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಸುಮಾರು 2 ಕೋಟಿಗೂ ಹೆಚ್ಚು ರೈತರ ಹೋರಾಟದ ಪ್ರಮುಖ ಬೇಡಿಕೆಗಳಲ್ಲಿ ಒಂದು ವಿದ್ಯುತ್  ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದೆನ್ನುವುದಾಗಿದೆ. ಈಗಾಗಲೇ 150 ಜನ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದರೂ ಹೆಜ್ಜೆ ಹಿಂದಿಟ್ಟಿಲ್ಲ.ಈ ಸ್ಫೂರ್ತಿಯನ್ನು ತೆಗೆದುಕೊಂಡು ನಮ್ಮ ರಾಜ್ಯದಲ್ಲಿ ಎಐಯುಟಿಯುಸಿ ಸಂಯೋಜಿತವಾದ ಎಐಪಿಎಫ್ ಮತ್ತು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘ ಗಳು ವಿದ್ಯುತ್ಕ ಖಾಸಗಿಕರಣದ ವಿರುದ್ಧ ರಾಜಿ ರಹಿತ ಹೋರಾಟಕ್ಕೆ  ಸಮಸ್ತ ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರೆಲ್ಲ ಮುನ್ನಡೆಯಬೇಕಾಗಿದೆ ಎಂದರು. ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಭುವನ ಬಳ್ಳಾರಿ,  ಜಿಲ್ಲಾ ಕಾರ್ಯದರ್ಶಿ ರಮೇಶ್ ಹೊಸಮನಿ,  ವಿಜಯಲಕ್ಷ್ಮಿ, ಪಾರ್ವತಿ,ಮಂಜುಳಾ ಪಾಟೀಲ್, ಗೀತಾ, ಈರಣ್ಣ, ರೇಷ್ಮಾ, ವಿದ್ಯಾ, ಶ್ರೀದೇವಿ, ಮೌಲಾಲಿ ಇನ್ನಿತರ ಗುತ್ತಿಗೆ ನೌಕರರು, ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಸುದ್ದಿ ಓದಿ