ಜಮಖಂಡಿ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಧರಣಿ

ಲೋಕದರ್ಶನ ವರದಿ, 

ಜಮಖಂಡಿ 16: ತಾಲೂಕಿನ ಕೊಣ್ಣೂರು ಗ್ರಾಮದ ಮಡ್ಡಿ ಪ್ಲಾಟಿನ ನಿವಾಸಿಗಳಿಗೆ ಹಕ್ಕು ಪತ್ರ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹವನ್ನು ನಡೆಸಿದ್ದಾರೆ. 

ನಗರದ ತಾಲೂಕ ಪಂಚಾಯತ ಆವರಣದಲ್ಲಿ ನಡೆಸಿದ ಪ್ರತಿಭಟನಾಕಾರರು, ಸುಮಾರು 270ಕ್ಕೂ ಹೆಚ್ಚು ಕುಟುಂಬಗಳು 30 ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರಿಗೆ ಯಾವುದೇ ರೀತಿ ಹಕ್ಕು ಪತ್ರ ನೀಡುವ ಕಾರ್ಯ ಕೈಗೊಂಡಿರುವುದಿಲ್ಲ. 1992 ರಿಂದ 2007 ರವರೆಗೆ ಸುಮಾರು 108 ಹಕ್ಕು ಪತ್ರಗಳನ್ನು ನೀಡಿದರು ಕೂಡ ಅವು ಮಾನ್ಯ ಇಲ್ಲವೆಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿದ್ದಾರೆ. ಅಂದಿನ ಸರ್ಕಾರ ಜನವಸತಿಗಾಗಿ ರಾಜ್ಯಪಾಲರಿಂದ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ 27 ಎಕರೆ ಜಮೀನನ್ನು ಹಸ್ತಾಂತರ ಮಾಡಿರುತ್ತಾರೆ. ಆದರೆ ಅಧಿಕಾರಿಗಳು ಇಂದು ಈ ಬಡ ಬಗ್ಗರ ನೋವು ಅರ್ಥ ಮಾಡ್ಕೊತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಡ್ಡಿ ಪ್ಲಾಟ ನಿವಾಸಿಗಳಿಂದ ತಕ್ಷಣ ಹಕ್ಕು ಪತ್ರ ನೀಡಬೇಕು. ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಈ ಸ್ವತ್ತು ಉತಾರೆ ಪೂರೈಸಬೇಕು. ಇಲ್ಲದಿದರೆ ಮುಂಬರುವಂತಹ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಿ ನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು. 

ಮಡ್ಡಿ ಪ್ಲಾಟ ನಿವಾಸಿಗಳು ಅತೀ ಕಡುಬಡತನದಿಂದ ತಮ್ಮ ಜೀವನ್ನು ನಡೆಸುತ್ತಿದ್ದಾರೆ. ಕುಡಿಯಲು ಕಲುಷಿತವಾದ ನೀರನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಅನುದಾನದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. 

ನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹದಲ್ಲಿ ಗದ್ದಿಗೇಪ್ಪ ಧಾರವಾಡ, ಕಮಲವ್ವ ಹಕ್ಕಿ, ಭಾಗೀರತಿ ಹೆಬ್ಬಾಳ, ಬಾಗವ್ವ ಪಿಡಶೆಟ್ಟಿ, ಚಿನ್ನವ್ವ ದಳವಾಯಿ, ಯಮನವ್ವ ಮೇತ್ರಿ, ತಂಗೆವ್ವ ಜೋತ್ಯಪನ್ನವರ, ಶ್ರೀಶೈಲ ತಳವಾರ, ಹನುಮಂತ ಬಸನ್ನವರ, ಪರಸಪ್ಪ ತಳವಾರ, ಸಿದ್ದಾರೂಢ ಪತ್ತಾರ, ಮಾಳಪ್ಪ ಇಟ್ಟನ್ನರ ಸೇರಿದಂತೆ ಅನೇಕರು ಇದರು. 


ಸುದ್ದಿ ಓದಿ