ಜಮಖಂಡಿ

ಧರ್ಮ ಸಮ್ಮೇಳನಗಳು ಯುವಜನರಲ್ಲಿ ಸಂಸ್ಕಾರ, ರಾಷ್ಟ್ರಭಕ್ತಿಯ ಬೀಜ ಬಿತ್ತಲಿ

ಧರ್ಮ ಸಮ್ಮೇಳನಗಳು ಯುವಜನರಲ್ಲಿ ಸಂಸ್ಕಾರ, ರಾಷ್ಟ್ರಭಕ್ತಿಯ ಬೀಜ ಬಿತ್ತಲಿ

ಲೋಕದರ್ಶನ ವರದಿ

ಜಮಖಂಡಿ 14:  ಧರ್ಮ ಸಮ್ಮೇಳನಗಳು ಕೇವಲ ಮನಸ್ಸಿನ ಸಮಾಧಾನಕ್ಕೆ ಉಪನ್ಯಾಸಗಳಿಗೆ ಸೀಮಿತವಾಗದೆ, ಯುವ ಜನರಲ್ಲಿ ಸಂಸ್ಕಾರ, ರಾಷ್ಟ್ರಭಕ್ತಿ ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಭಾವನೆಗಳನ್ನು ಬೆಳೆಸುವ ವೇದಿಕೆಗಳಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.  ಈಶ್ವರ​‍್ಪ ಹೇಳಿದರು. ನಗರದ ಕಡಪಟ್ಟಿ ದೇವಸ್ಥಾನದ ಆವರಣದಲ್ಲಿ ಶ್ರೀಮದ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಬಾಳಿಗೆ ಬೆಳಕು ಕೃತಿ ಲೋಕಾರೆ​‍್ಣಗೊಳಿಸಿ ಮಾತನಾಡಿದ ಅವರು, ರಂಭಾಪುರಿ ಜಗದ್ಗುರುಗಳು ಹತ್ತು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಸಂಸ್ಕಾರ ನೀಡುವ ಸೇವೆ ಶ್ಯಾಘನೀಯ ಎಂದರು.  ಸಂಸ್ಕಾರವಂತ ಯುವ ಶಕ್ತಿ ಮತ್ತು ಸಮರ್ಥ ರಾಷ್ಟ್ರಭಕ್ತಿ ಎಂಬ ಆಶಯದೊಂದಿಗೆ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸಮಾಜಕ್ಕೆ ಸಂಸ್ಕಾರ ನೀಡುವಲ್ಲಿ ಸಾಧು-ಸಂತರ ಪಾತ್ರ ಪ್ರಮುಖವಾಗಿದ್ದು, ಅವರ ಮಾರ್ಗದರ್ಶನದಲ್ಲಿ  ಜೀವನ  ಯಶಸ್ವಿಗೊಳಿಸಿಕೊಳ್ಳಬೇಕು. ಹಿಂದುಧರ್ಮ ಸರ್ವರ ಹಿತಬಯಸುವ ಧರ್ಮವಾಗಿದೆ. ಜಾತಿ,ಮತಗಳ ಭೇದವಿಲ್ಲದೆ ಎಲ್ಲರ ಕಲ್ಯಾಣ ಬಯಸುವ ಉದಾತ್ತ ಚಿಂತನೆ ಭಾರತೀಯ ಸಂಸ್ಕೃತಿಯಲ್ಲಿದೆ. ಸಾಧು-ಸಂತರು ತಮ್ಮ ಜೀವನದಲ್ಲಿ ತಪಸ್ಸು, ಸಮಾಜ ಮತ್ತು ಲೋಕಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿರುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ದಿವ್ಯಸಾನಿಧ್ಯ ವಹಿಸಿದ್ದರು, ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ಅನೇಕ ಮಠಾಧೀಶರುಗಳು ಇದ್ದರು.


ಸುದ್ದಿ ಓದಿ