ಬೈಲಹೊಂಗಲ

ಶಾಸಕ ಪಿ ರಾಜೀವ ಸಚಿವ ಕಾರಜೋಳ ಹೇಳಿಕೆ ಖಂಡಿಸಿ ಪ್ರತಿಭಟನೆ

ಶಾಸಕ ಪಿ ರಾಜೀವ ಸಚಿವ ಕಾರಜೋಳ ಹೇಳಿಕೆ ಖಂಡಿಸಿ ಪ್ರತಿಭಟನೆ

ಬೇಡ-ಜಂಗಮ ಸಮಾಜ ಬಾಂಧವರಿಂದ ಶಾಸಕ ಸಚಿವರ ಪ್ರತಿಕೃತಿ ದಹನ 

ಬೈಲಹೊಂಗಲ 24: ಬೇಡ-ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡುತ್ತಿರುವ ಕುಡಚಿ ಶಾಸಕ ಪಿ ರಾಜೀವ  ಶಾಸಕರಾಗಲು ಅನರ್ಹ ರಾಗಿದ್ದು ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಬೇಡಜಂಗಮ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಕುಡಚಿ ಶಾಸಕ ಪಿ.ರಾಜೀವ್, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಪ್ರತಿಕೃತಿ ದಹನ ಮಾಡಿ ಬೇಡ-ಜಂಗಮ ಸಮಾಜ ಬಾಂಧವರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಬೇಡ-ಜಂಗಮ ಸಮಾಜ ಭಾಂದವರು ಅಖಿಲ ಕರ್ನಾಟಕ ಡಾ.ಅಂಭೇಡ್ಕರ ಬೇಡ-ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ, ತಾಲೂಕಾಧ್ಯಕ್ಷ ಸಂತೋಷ ಮಠಪತಿ, ಡಾ.ಮಹಾಂತೇಶ ಶಾಸ್ರ್ತಿ ಆರಾದ್ರಿಮಠ, ಭಗಳಂಬಾ ದೇವಿಯ ಈರಯ್ಯಶಾಸ್ರ್ತಿ ಹಿರೇಮಠ ನೇತೃತ್ವದಲ್ಲಿ  ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ನಂತರ ಪ್ರತಿಭಟನೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದ  ಬೇಡ ಜಂಗಮ ಜಿಲ್ಲಾಧ್ಯಕ್ಷ ಬಸಲಿಂಗಯ್ಯ ಚಿಕ್ಕಮಠ  1901 ರಿಂದಲೇ ಬೇಡ ಜಂಗಮ ಸಮುದಾಯಕ್ಕೆ ಮೀಸಲಾತಿಯನ್ನು ನಿಜಾಮ ಸರ್ಕಾರದಲ್ಲಿಯೇ ನೀಡಲಾಗಿತ್ತು. ಇದೇ ಆಧಾರವನ್ನು ಇಟ್ಟುಕೊಂಡು ಬ್ರಿಟಿಷರ ಸರ್ಕಾರ 1935 ರಲ್ಲಿ ಬ್ರಿಟಿಷ್ ಇಸ್ಟ ಇಂಡಿಯಾ ಕಂಪನಿ ಸಂವಿಧಾನದಲ್ಲಿಯೂ ಬೇಡ ಜಂಗಮರನ್ನು ಸೇರೆ​‍್ಡ ಮಾಡಿ ಸೌಲತ್ತು ನೀಡಲಾಗಿತ್ತು. ಇದಲ್ಲದೇ 1950 ರಲ್ಲಿ ಸಂವಿಧಾನ ಸಮಿತಿ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಸಹ ಹಿಂದಿನ ಆದೇಶಗಳು ಮತ್ತು ಗೆಜೆಟ್ ಗಳನ್ನು ಉಲ್ಲೇಖಿಸಿ ಬೇಡ ಜಂಗಮ ಎಂದು ಸಂವಿಧಾನದಲ್ಲಿ ಸೇರೆ​‍್ಡ ಮಾಡಿ ನ್ಯಾಯ ಒದಗಿಸಿದ್ದಾರೆ.  1985 ರವರೆಗೆ ಮೀಸಲಾತಿ ಸೌಲತ್ತು ನೀಡಲಾಗಿತ್ತು. 1985 ರ ನಂತರ ಕೆಲವು ರಾಜಕೀಯ ಪುಡಾರಿಗಳ ಕೈಚಳಕದಿಂದಾಗಿ ನಮಗೆ ಸಂವಿಧಾನಬದ್ಧವಾಗಿ ಸಿಗುತ್ತಿದ್ದ ಸೌಲತ್ತು ಸಿಗದಂತೆ ಮಾಡಿದರು ಎಂದು ಅವರು ದೂರಿದರು.ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಇವರು ಶಾಸಕರಾಗಲು ಅನರ್ಹರಾಗಿದ್ದು ಆ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ಬೇಡ-ಜಂಗಮ ಸಮಾಜದ ಕ್ಷಮೆ ಕೇಳಬೆಕೆಂದರು. 

ಡಾ.ಮಹಾಂತೇಶ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಕೆಲ ಕುತಂತ್ರಿ ರಾಜಕಾರಣಿಗಳು ದುರದ್ದೇಶದಿಂದ  ಇಲ್ಲಸಲ್ಲದ ಸುತ್ತೋಲೆ ಹೊರಡಿಸುವುದು, ಅಧಿಕಾರಿಗಳಿಗೆ ತೊಂದರೆ ಕೊಡುವುದು, ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹೆದರಿಸುವುದು ಮಾಡುತ್ತಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ. ಜಂಗಮರ ಜೋಳಿಗೆಗೆ ಕೈಹಾಕಿ ತಿನ್ನುವ ದುರ್ಬದ್ದಿಯನ್ನು ನಿಲ್ಲಿಸಿ, ಜವಾಬ್ದಾರಿಯನ್ನು ಅರಿತು ನಮ್ಮ ಸಮಾಜದ ಕ್ಷಮೆ ಕೇಳಬೇಕು, ಸಂವಿಧಾನ ವಿರೋಧಿ ಕೆಲಸವನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದರು.    

ತಾಲೂಕಾಧ್ಯಕ್ಷ ತಾಲೂಕಾಧ್ಯಕ್ಷ ಸಂತೋಷ ಪಶುಪತಿಮಠ ಮಾತನಾಡಿ,  ನಿಜಾಮರ ಕಾಲದಲ್ಲಿ ಸೆನ್ಸಸ್ ಆಫ್ ಇಂಡಿಯಾ 1901ರಲ್ಲಿ ಬೇಡಜಂಗಮರು ಧಾರ್ಮಿಕ ಭಿಕ್ಷಾಟನೆ ಮಾಡುವವರು ಎಂದು ದಾಖಲಿಸಿ, 1935 ರಲ್ಲಿ ಬ್ರಿಟಿಷರು ದಿ. ಫಸ್ಟ್‌ ಶೆಡ್ಯೂಲ್ ಕಾಸ್ಟ್‌ ಪಟ್ಟಿಯಲ್ಲಿ ಜಂಗಮ ಜಾತಿಯನ್ನು ಸೇರಿಸಲಾಗಿದೆ. ದೇಶಕ್ಕೆ ಸ್ವಾತಂತ್ರೃ ಬಂದ ನಂತರ ಆ ಪಟ್ಟಿಯನ್ನು ಮುಂದುವರಿಸಿಕೊಂಡು ರಾಷ್ಟ್ರಪತಿಗಳು 341 ನೇ ವಿಧಿ ಪ್ರಕಾರವಾಗಿ ಬೇಡ, ಜಂಗಮ 19ನೇ ಸಂಖ್ಯೆಯಲ್ಲಿ ಸೇರಿಸಿ ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದರು. 

ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಗುರುಶಾಂತ ತೆಂಗಿನಮಠ,  ಸಂಚಾಲಕ ಶ್ರೀಶೈಲ ಏಣಗಿಮಠ,  ರುದ್ರಯ್ಯ ಚರಂತಿಮಠ ಮಂಜುನಾಥ ಕುಲಕರ್ಣಿ, ರಾಚಯ್ಯ ರೋಟೈನವರಮಠ,  ಚೆನ್ನಯ್ಯ ಚಿಕ್ಕಮಠ, ಬಸಯ್ಯ ಪೂಜಾರ, ಪ್ರಶಾಂತ ಕುಲಕರ್ಣಿ, ಪ್ರವೀಣ್ ಹಿರೇಮಠ, ವೇ.ಮೂ ವೀರಯೈಸ್ವಾಮಿ ಹಿರೇಮಠ,  ಗುರುಸಿದ್ದಯ್ಯ ಹಿರೇಮಠ , ಗುರು ಮಾಂತೇಶ ಹಿರೇಮಠ, ಜಗದೀಶ್ ಯರಗಟ್ಟಿಮಠ, ಬಸಯ್ಯ ಶಿವಪ್ಪಯ್ಯನಮಠ , ವಿನಯ್ ಮಾಸ್ತಿಮರಡಿಮಠ,  ರಘು ಸಂಬಳದ, ಮಹಾಂತಯ್ಯ ಒಕ್ಕುಂದಮಠ, ಬಸಯ್ಯ ರುದ್ರಪುರಮಠ, ಸಂಗಯ್ಯ ಪಾಟೀಲ್, ಮಹಾಂತೇಶ್ ಪೂಜಾರಿ,  ಈಶ್ವರ್ ಗಾಳಿಮರಡಿ, ಶೇಕಯ್ಯ ಹಿರೇಮಠ್ , ಉಮೇಶ್ ಬಿಕ್ಷಾವತಿಮಠ , ಅಣ್ಣಯ್ಯ ಹಿರೇಮಠ ಸಿದ್ದಲಿಂಗಯ್ಯ ಹಿರೇಮಠ , ನಾಗಯ್ಯ ಹಿರೇಮಠ , ಮಲ್ಲಿಕಾರ್ಜುನ್ ಏಣಗಿಮಠ , ಆನಂದ ಪಶುಪತಿಮಠ, ಬಸಯ್ಯ ಚಿಕ್ಕಮಠ , ರಮೇಶ್ ಕಾರಿಮನಿ , ಬಸವರಾಜ್ ಕಿವಡಿಮಠ . ಗುರುಲಿಂಗಯ್ಯ ಚರಂತಿಮಠ, ಶಿವಪುತ್ರಯ್ಯ ಚರಂತಿಮಠ, ಈರಣ್ಣ ಪಾವಡಿ, ಶಿವಯ್ಯ ಪುರಾಣಿಕಮಠ, ಬಸಯ್ಯ ಹಿರೇಮಠ, ಪ್ರಶಾಂತ್ ಹಿರೇಮಠ, ಬಸವರಾಜ್‌.ಹಿರೇಮಠ ಹಾಗೂ ಎಲ್ಲ ಜಂಗಮ ಸಮಾಜ ಬಾಂಧವರು ಇದ್ದರು. 


ಸುದ್ದಿ ಓದಿ