ಕಾಂಗ್ರೆಸ್ ವಿರೋಧ ನೀತಿ ಖಂಡಿಸಿ ಪ್ರತಿಭಟನೆ
ರಾಣಿಬೆನ್ನೂರ 27: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಕ್ಷುಲ್ಲಕ ವಿಷಯಕ್ಕಾಗಿ ಕಾಂಗ್ರೇಸ್ನವರು ಕದ್ದಲ, ಗಲಾಟೆ ಹಾಗೂ ಆಹೋರಾತ್ರಿ ಧರಣಿ ನಡೆಸಿ ಜನರಲ್ಲಿ ಗೊಂದಲಮಯ ವಾತಾವರಣ ಉಂಟು ಮಾಡಿದ್ದನ್ನು ಖಂಡಿಸಿ ತಾಲೂಕಾ ಬಿಜೆಪಿಯಿಂದ ಶನಿವಾರದಂದು ಪ್ರತಿಭಟನೆ ನಡೆಸಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಿಮದ ಹೊರಟ ಪ್ರತಿಭಟನಾ ಮೆರವಣಿಗೆಯು ಅಂಚೆವೃತ್ತ ಮತ್ತಿತರ ಕಡೆಗಳಲ್ಲಿ ಸಂಚರಿಸಿ ಪ್ರತಿಭಟಿಸಿತು. ಸರಿಯಾದ ವಿರೋಧ ಪಕ್ಷ ಇಲ್ಲದ ಈ ರಾಜ್ಯದಲ್ಲಿ ಕಾಂಗ್ರೇಸ್ನವರು ಮನಬಂದಂತೆ ವರ್ತಿಸುತ್ತಾರೆ. ದೇಶಕ್ಕಿಂತ ಪಕ್ಷ ಮತ್ತು ಪ್ರತಿಷ್ಟೆಗೆ ಅವರಿಗೆ ಹೆಚ್ಚಾಗಿದ್ದು, ಈ ಕಾರಣದಿಂದಲೇ ಕಾಂಗ್ರೇಸ್ ಪಕ್ಷವು ದೇಶಾದ್ಯಂತ ನೆಲಕಚ್ಚರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಅರುಣಕುಮಾರ ಪೂಜಾರ, ವಿಪ ಸದಸ್ಯ ಆರ್.ಶಂಕರ್, ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಜ ಸಜ್ಜನ, ಡಾಽ ಬಸವರಾಜ ಕೇಲಗಾರ, ತಾಲೂಕಾಧ್ಯಕ್ಷ ಬಸವರಾಜ ಕೇಲಗಾರ, ನಗರಾಧ್ಯಕ್ಷ ದೀಪಕ್ ಹರಪನಹಳ್ಳಿ, ಮಂಜುನಾಥ ಓಲೇಕಾರ, ಕೆ.ಶಿವಲಿಂಗಪ್ಪ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ಭಾರತಿ ಜಂಬಗಿ, ಅನಿಲ ಸಿದ್ದಾಳಿ, ರಮೇಶ ಗುತ್ತಲ, ರೂಪಾ ಚಿನ್ನೀಕಟ್ಟಿ, ಯುವರಾಜ ಭಾರಾಟಕ್ಕೆ, ಪವನಕುಮಾರ ಮಲ್ಲಾಡದ, ಭಾರತಿ ಅಳವಂಡಿ, ಗಂಗಮ್ಮ ಹಾವನೂರ, ಅಸುಂಡಿ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.