ರಾಣೆಬೆನ್ನೂರ

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ: ಮುಖ್ಯಮಂತ್ರಿಗಳಿಗೆ ಮನವಿ

ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ: ಮುಖ್ಯಮಂತ್ರಿಗಳಿಗೆ ಮನವಿ

ರಾಣಿಬೆನ್ನೂರ 10: ಕನಿಷ್ಠ ಮಾಸಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ, ಆಶಾ ಕಾರ‌್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಶಂಕರ ಜಿ.ಎಸ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಛಾಯಾ ಕುಲಕರ್ಣಿ ಮಾತನಾಡಿ ಕನಿಷ್ಠ 21 ಸಾವಿರ ಮಾಸಿಕ ವೇತನ ಮತ್ತು 10 ಸಾವಿರ ರೂ. ಪಿಂಚಣಿ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ 5 ಲಕ್ಷ ರೂ. ನಿವೃತ್ತಿ ನಡಿಗಂಟು ನೀಡಬೇಕು. ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತೆಯರಿಗೆ ಅಗತ್ಯವಿರುವಷ್ಟು ಮಾಸ್ಕ್‌ ಸಹಿತ ಎಲ್ಲಾ ಸುರಕ್ಷಿತ ಸಾಮಾಗ್ರಿ ಒದಗಿಸಬೇಕು, ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ಕನಿಷ್ಠ 1 ಲಕ್ಷ ರೂ. ಆರೋಗ್ಯ ಸಹಾಯ ಧನ ಮತ್ತು ಸಾವೀಗೀಡಾದ ಕುಟುಂಬಗಳಿಗೆ ಘೋಷಿತ 50 ಲಕ್ಷ ರೂ.ಪರಿಹಾರ ನೀಡಬೇಕು. ಕಳೆದ ಆರು ತಿಂಗಳಿಂದ ನೀಡದ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ  ರೂಪಾ ಮುದಿಗೌಡರ, ತ್ರೀವೇಣಿ ಬಿನ್ನಳ, ಮಮತಾ ಮಾಳಗಿ, ಸುನಿತಾ ಶಿಡಗನಾಳ, ಮಂಗಳಾ ಜಿಗಳೇರ, ಸುಧಾ ಹಲಗೇರಿ, ಶೈಲಾ ಅಜ್ಜೇವಡಿಮಠ, ಹೊನ್ನವ್ವ ಪಾಟೀಲ, ಗರೀಬಬಿ ಲಿಯಾನ್, ಲತಾ ಬ್ಯಾಡಗಿ, ಲಕ್ಷ್ಮಿದೇವಿ, ದಾಕ್ಷಾಯಿಣಿ ಪೂಜಾರ, ರೇವತಿ ಚಿನ್ನಿಕಟ್ಟಿ, ಆಶಾ ದೇವರಡ್ಡಿ, ನೇತ್ರಾವತಿ ಶಿಂಗ್ರಿ, ಗೀತಾ ಗಡ್ಡದ, ಜ್ಯೋತಿ ಪೂಜಾರ, ಲಲಿತಾ ಹಡಗಲಿ, ಮಂಜುಳಾ ನಾಯಕ ಇದ್ದರು. 

ಸುದ್ದಿ ಓದಿ