ಹೊಸಪೇಟೆ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ವಿರೋಧಿಸಿ ಪ್ರತಿಭಟನೆ ಮನವಿ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ವಿರೋಧಿಸಿ ಪ್ರತಿಭಟನೆ ಮನವಿ

ಹೊಸಪೇಟೆ 04: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ನಂಬರ್ ಜೋಡಣೆಯ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆಯನ್ನು ಜಾರಿ ಮಾಡಬಾರದು. ಗೃಹಬಳಕೆ 200 ಯೂನಿಟ್‌ಗಿಂತ ಹೆಚ್ಚುವರಿಯಾಗಿ ಬಂದಂತಹ ಯುನಿಟ್ ಧರವನ್ನು ಈ ಕೂಡಲೇ ಕಡಿಮೆ ಮಾಡಬೇಕು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದುವ ವ್ಯಕ್ತಿಯ ಕುಟುಂಬಕ್ಕೆ ರೂ.10,00,000ಗಳ ಪರಿಹಾರವನ್ನು ನೀಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸಿನಿಂದ 8 ತಾಸಿನವರೆಗೆ ನಿರಂತರ ವಿದ್ಯುತ್ ಸಂಪರ್ಕವನ್ನು ನೀಡಬೇಕು. ಗೃಹಬಳಕೆಯ ವಿದ್ಯುತ್‌ನ್ನು ನಗರಭಾಗದಲ್ಲಿ ನಿರಂತರವಾಗಿ ನೀಡುತ್ತಿದ್ದು, ಹಳ್ಳಿ ಭಾಗದಲ್ಲಿ ಮಾತ್ರ ವಿದ್ಯುತ್‌ನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ.  

ಇದು ಸಮನಾಂತರವಾಗಿ ಹಳ್ಳಿ ಮತ್ತು ನಗರ ಭಾಗದಲ್ಲಿ ಗೃಹ ಬಳಕೆ ವಿದ್ಯುತ್ ನೀಡಬೇಕು. ಸುಮಾರು 50 ರಿಂದ 60 ವರ್ಷಗಳಿಂದೆ ಕೃಷಿ ಪಂಪ್‌ಸೆಟ್‌ಗಳಿಗೆ ಹಾಕಿರುವಂತಹ ವಿದ್ಯುತ್ ಸಂಪರ್ಕದ ತಂತಿಯನ್ನು ಪ್ರಸ್ತುತದವರೆಗೆ ಯಾವುದೇ ರೀತಿಯಾಗಿ ಬದಲಾವಣೆ ಮಾಡಿರುವುದಿಲ್ಲ. ಮತ್ತು ಇದನ್ನು ತ್ವರಿತಗತಿಯಲ್ಲಿ ಈಗಿನ ಉತ್ತಮ ವಿದ್ಯುತ್ ಸಂಪರ್ಕದ ತಂತಿಗಳನ್ನು ಹಾಕಬೇಕು. ಬೈಲುವದ್ದಿಗೇರಿ ಗ್ರಾಮದ ಹತ್ತಿರ 110 ಕೆ.ವಿ. ಸಬ್‌ಸ್ಟೇಷನ್ ಪ್ರಮಾಣ ವಿದ್ಯುತ್ ಸಂಪರ್ಕದ ವ್ಯವಸ್ಥಾ ಕೇಂದ್ರವು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದನ್ನು ಆದಷ್ಟು ತ್ವರಿತಗತಿಯಲ್ಲಿ ಮಾಡಬೇಕು. ಏಕೆಂದರೆ ಬೈಲುವದ್ದಿಗೇರಿ ಗ್ರಾಮದಿಂದ ಇನ್ನಿತರೆ ಸುತ್ತಮುತ್ತಲಿರುವ ಎಲ್ಲಾ ಭಾಗದ ಗ್ರಾಮಗಳಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ.  

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮ ಸುಟ್ಟುಹೋದ ನಂತರ ಬಹಳ ದಿನಗಳ ವರೆಗೆ ರೈತರನ್ನು ಅಲೆದಾಡಿಸುವುದನ್ನು ತಪ್ಪಿಸಿ ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಂಡು 24 ತಾಸಿನ ಒಳಗಡೆ ಟಿ.ಸಿ.ಯನ್ನು ರೈತರಿಗೆ ನೀಡಬೇಕು. ಈ ಹಿಂದೆ ರೈತರಿಗೆ ಅಕ್ರಮಸಕ್ರಮ ಯೋಜನೆ ಅಡಿಯಲ್ಲಿ ಆರ್‌.ಆರ್‌.ನಂಬರ್ ಮತ್ತು ಟಿ.ಸಿ. ಮತ್ತು ಕಂಬಗಳು ರೈತರಿಗೆ ಉಚಿತವಾಗಿ ನೀಡುತ್ತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಉಚಿತವಾಗಿ ನೀಡುವುದನ್ನು ರದ್ದುಪಡಿಸಿ ಹಣವನ್ನು ವಸೂಲಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಿ ಮೊದಲಿನಂತಯೇ ರೈತರ ಉಚಿತ ರೀತಿಯಲ್ಲಿ ಅನುಕೂಲ ಮಾಡಿಕೊಡಬೇಕು.  

ಈ ಸಂಧರ್ಬದಲ್ಲಿ ಟಿ.ನಾಗರಾಜ್ ಜಿಲ್ಲಾಧ್ಯಕ್ಷರು, ಎಂ.ಜಡೆಪ್ಪ ಜಿಲ್ಲಾ ಕಾರ್ಯಧ್ಯಕ್ಷರು, ಸಣ್ಣಕ್ಕಿ ರುದ್ರ​‍್ಪ ತಾಲೂಕು ಅಧ್ಯಕ್ಷರು, ಜಯರುದ್ದೀನ್ ರಾಜ್ಯ ಉಪಾಧ್ಯಕ್ಷರು,  ಜಾಕೀರ್ ತಾಲೂಕು ಉಪಾಧ್ಯಕ್ಷರು, ಮೂರ್ತಿ ತಾಲೂಕು ಉಪಾಧ್ಯಕ್ಷರು, ಹೆಚ್‌.ಸತೀಶ್ ತಾಲೂಕು ಉಪಾಧ್ಯಕ್ಷರು, ಎ.ರಾಮಾಂಜಿನಿ ತಾಲೂಕು ಉಪಾಧ್ಯಕ್ಷರು, ವಿ.ಗಾಳೆಪ್ಪ ತಾಲೂಕು ಉಪಾಧ್ಯಕ್ಷರು, ಸುರೇಶ್ ನಗರ ಘಟಕ ಅಧ್ಯಕ್ಷರು, ಕೆ.ರಾಮಾಂಜಿನಿ ತಾಲೂಕು ಸಹ ಕಾರ್ಯದರ್ಶಿ, ಎಲ್‌.ನಾಗೇಶ್ ತಾಲೂಕು ಕಾರ್ಯದರ್ಶಿ, ಮಹಾರಾಜ್ ದುರುಗಪ್ಪ ರೈತ ಮುಖಂಡರು, ಬಸವರಾಜ್, ಗೋವಿಂದಪ್ಪ, ಅಂಕ್ಲೇಶ್, ಪರಶುರಾಮ, ಹನುಮಂತ ರೆಡ್ಡಿ, ರುದ್ರೇಶ್, ಪ್ರಕಾಶ್, ಪೂರ್ಣೇಶ್, ಪರ್ವತರೆಡ್ಡಿ, ಮಲ್ಲಪ್ಪ, ರಾಜಪ್ಪ, ಇನ್ನು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ