ವಕ್ಫ್ ಆಸ್ತಿ ಸರಕಾರ ಖಂಡಿಸಿ ಪ್ರತಿಭಟನೆ: ಅನೇಕ ಸಂಘಟನೆಗಳ ಬೆಂಬಲ
ಮುದ್ದೇಬಿಹಾಳ 12: ರೈತರ ಪಹಣಿಯಲ್ಲಿನ ಕಾಲಂ 11 ರಲ್ಲಿ ವಕ್ಫ್ ಆಸ್ತಿ ಸರಕಾರ ಎಂದು ನಮೂದಿಸಿದ್ದನ್ನು ಖಂಡಿಸಿ ತಾಲೂಕಾ ಕುಂಟೋಜಿ ಬಿದರಕುಂದಿ ಭಾಗಗಳ ರೈತರು ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಕಳೇದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ತಾಲೂಕಾ ಮಾಜಿ ಸೈನಿಕರ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಭೇಟಿ ನೀಡಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿದರು.
ಈ ವೇಳೆ ಮುಖಂಡ ಶಿವಯೋಗೆಪ್ಪ ರಾಂಪೂರ, ಮಾಜಿ ಸೈನಿಕರಾದ ಕುಂಟೋಜಿ ಗ್ರಾಮದ ನಾಗಲಿಂಗಯ್ಯ ಮಠ ಹಾಗೂ ಮಾಜಿ ಸೈನಿಕ ಪಿ ಜಿ ಬಿರಾದಾರ ಅವರು ಮಾತನಾಡಿ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಅಜ್ಜ ಮುತ್ತಜ್ಜ ಹೀಗೆ ನಮ್ಮ ಪೂರ್ವಜರ ಆಸ್ತಿಯು ನಿಯಮಾನುಸಾರ ನಮ್ಮ ಹೆಸರಲ್ಲಿರುವ ಅಸ್ತಿಯನ್ನು, ಆ ವೇಳೆ ವಕ್ಫ್ ಎಂದು ಯಾವೂದೇ ಉಲ್ಲೇಖವಿಲ್ಲದಿದ್ದರೂ ಸದ್ಯ 2019 ಜನೇವರಿಯಂದು ರೈತರಿಗೆ ಯಾವೂದೇ ನೋಟಿಸ್ ನೀಡಿದೇ ಪಹಣಿಯಲ್ಲಿ ಕಾಲಂ 11 ರಲ್ಲಿ ವಕ್ಫ್ ಸರಕಾರ ಎಂದು ಏಕಾಏಕಿ ಸೇರೆ್ಡ ಮಾಡುವ ಮೂಲಕ ನಮ್ಮೇಲ್ಲ ರೈತರಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ರೈತರು ತಮ್ಮ ಜಮೀನು ಇದ್ದರೂ ಸರಕಾರದ ಯಾವೂದೇ ಸೌಲಭ್ಯ ಪಡೆದುಕೊಳ್ಳದೇ ತೀವೃ ಸಂಕಷ್ಟಕ್ಕೆ ಸಿಲುಕುಂವತೆ ಮಾಡಿರುವ ಸರಕಾರದ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ.
1973 ರಲ್ಲಿ ಗೇಜೆಟ್ ಗೈರ ಕಾನೂನು ಮಾಡಿರುವ ತಪ್ಪುಗಳನ್ನು ತಹಶಿಲ್ದಾರವರು ಕೂಡ ಒಪ್ಪಿಕೊಂಡು ಅಸಹಾಯಕ ಸ್ಥಿತಿಯಲ್ಲದ್ದಾರೆ, ವಕ್ಫ್ ಮಂಡಳಿಯ ಅವೈಜ್ಞಾನಿಕ ಕ್ರಮದ ಕುರಿತು ನಾಡಿನಾದ್ಯಂತ ಹೋರಾಟಗಳು ಪ್ರಾರಂಭಗೊಂಡ ಹಿನ್ನೇಲೆಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ತಕ್ಷಣದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ತಕ್ಷಣದಲ್ಲಿ ರೈತರ ಜಮೀನಿನ ಪಹಣಿಯಲ್ಲಿರುವ ಈ ರೀತಿ ವಕ್ಫ್ ಸರಕಾರ ಎಂದು ನಮೂದಿಸಿದ್ದನ್ನು ತೆರವುಗೊಳಿಸಿ ಎಂದು ಆದೇಶ ಮಾಡಿದರೂ ಸಹಿತ ಇಲ್ಲಿತನಕವೂ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ತಾಲೂಕಿನ 4ನೂರಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಸರಕಾರ ಇರುವುದನ್ನು ಕಡಿಮೆ ಮಾಡಿಲ್ಲ ಕಾರಣ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಅನಿವಾರ್ಯವಾಗಿದೆ.
ರೈತರು ಈ ದೇಶದ ಬೆನ್ನೆಲಬು ಎಂದು ಹೇಳಿಕೊಂಡು ಭಾಷಣ ಮಾಡುವ ಸರಕಾರ ಸಧ್ಯ ರೈತರ ಜಮೀನನಕ್ಕೆ ಕಬಳಿಸಲು ಸಂಚು ರೂಪಿಸಿದೆ ಇದರಿಂದ ರೈತರು ಕಂಗಾಲಾಗಿದ್ದಾರೆ ಕಾರಣ ಪಹಣಿಯಲ್ಲಿ ಕಾಲಂ 11 ನಲ್ಲಿ ವಕ್ಫ್ ಸರಕಾರ ಎಂದು ನಮೂದಿಸಿದ್ದನ್ನು ಈ ಕೂಡಲೇ ತೆರವುಗೊಳಿಸಿ ರೈತರಿಗೆ ನ್ಯಾಯೊದಗಿಸಬೇಕು ಅಲ್ಲಿಯವರಿಗೂ ಧರಣಿ ಹಿಂಪಡೆಯುವ ಪ್ರಶ್ನೇಯೇ ಇಲ್ಲವೆಂದು ಪಟ್ಟು ಹಿಡಿದರು. ಜೊತೆಗೆ ತಹಶಿಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರು ಮದ್ಯ ಪ್ರವೇಶಸಿ ತಹಶಿಲ್ದಾರ ಬಲರಾಮ ಕಟ್ಟಿಮನಿಯವರ ಸಮ್ಮುಖದಲ್ಲಿ ಮನವಿಗೆ ಸ್ಪಂದಿಸಿ ದಿ, ನ, 16ರವರಗೆ ಕಾಲಾವಕಾಶ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಆದೇಶದ ಮೇರೆಗೆ ರೈತರಿಗೆ ಸೂಕ್ತ ನ್ಯಾಯ ಒದಗಸಲಾಗುವುದು ಎಂದು ರೈತ ಸಂಘಟನೆಗಳ ಪ್ರತಿಭಟನಾಕಾರರನ್ನು ಮನೋಲಿಸಿ ಧರಣಿ ಸತ್ಯಾಗ್ರಹ ಕೈಬಿಡುವಂತೆ ಸೂಚಿಸಿದ ಹಿನ್ನೇಲೆಯಲ್ಲಿ ಧರಣಿ ನಿರತರು ಪ್ರತಿಭಟನೆ ಕೈಬಿಟ್ಟರು.
ಈ ವೇಳೆ ಯಾವೂದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸೇರಿದಂತೆ ನೂರಾರು ಪೋಲಿಸ್ ಬಿಗಿಬಂಧೋಬಸ್ತ ಒದಗಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಭು ಕಡಿ, ಗುರಲಿಂಗಪ್ಪ ಸುಳ್ಳಳ್ಳಿ, ರವಿ ಜಗಲಿ, ಮಾಜಿ ಸೈನಿಕರಾದ ಸಿ ಎನ್ ಪೂಜಾರಿ,ಎಸ್ ಚಿ ಹಿರೇಮಠ, ಎಸ್ ವಿ ಹೊಳಿ, ಎಸ್ ಕೆ ಕತ್ತಿ, ಜಿ ಜಿ ಸೂಳಿಭಾವಿ, ಬಸವರಾಜ ಹಡಪದ, ಎಸ್ ಐ ಗಡೇದ, ಆರ್ ಎಚ್ ಜೈನಾಪೂರ, ನಾನಪ್ಪ ನಾಯಕ, ಎಸ್ ಡಿ ಹೂಗಾರ, ಕೆ ಡಿ ಇಂಗಳಗೇರಿ, ಹಿಂಧೂ ಪರಿಷತ್ ನ ಮುಖಂಡರಾದ ಪುನಿತ್ ಹಿಪ್ಪರಗಿ, ಸಂಜು ಬಾಗೇವಾಡಿ, ಸಂಗಮೇಶ ಹತ್ತಿ, ಮಾಣಿಕ ದಂಡಾವತಿ, ರಂವಿಂದ್ರ ಬಿರಾದಾರ ಬಸಯ್ಯ ನಂದಿಕೇಶ್ವರಮಠ, ಜಗಧೀಶ ಪಂಪಣ್ಣವರ, ಅಶೋಕ ರಾಠೋಡ, ವಿರೇಶ ಕಲ್ಲೂರ, ಸಂತೋಷ ಬಾದರಬಂಡಿ, ಗೀರಿಶಗೌಡ ಪಾಟೀಲ, ಅನೀಲ ರಾಠೋಡ, ನಿಖಲಿ ಮಲಗಲದಿನ್ನಿ, ಪ್ರಥಿ ಕಂಬಾರ, ಕಾವೇರಿ ಕಂಬಾರ, ರೇಖಾ ಕೊಂಡಗೂಳಿ,