ಬಸವೇಶ್ವರ ಭಾವಚಿತ್ರ ಅಪಮಾನ ಖಂಡಿಸಿ ಪ್ರತಿಭಟನೆ
ತಾಳಿಕೋಟಿ 21: ಕಲಬುರ್ಗಿ ಜಿಲ್ಲೆ ಚಿತಾಪುರ ತಾಲೂಕಿನ ಹಲಕಟೆ9 ಗ್ರಾಮದಲ್ಲಿ ಇತ್ತೀಚಿಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನಿಸಿದ ಘಟನೆಯನ್ನು ಖಂಡಿಸಿ ಇಲ್ಲಿಯ ವೀರಶೈವ ಲಿಂಗಾಯತ ಯುವ ಘಟಕ ಬಸವೇಶ್ವರ ಉತ್ಸವ ಸಮಿತಿ ಹಾಗೂ ಬಸವ ಅಭಿಮಾನಿ ಬಳಗದವರು ವಿವಿಧ ಸಮಾಜದವರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಉಪತಸಿಲ್ದಾರ್ ಮೂಲಕ ಮಾನ್ಯ ಘನ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶನಿವಾರ ಪಟ್ಟಣದ ಅಂಬಾ ಭವಾನಿ ಮಂದಿರದಿಂದ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕತ್ರಿ ಬಜಾರ ಶಿವಾಜಿ ಸರ್ಕಲ್ ಬಸ್ ನಿಲ್ದಾಣದ ಮೂಲಕ ಹಾದು ಬಸವೇಶ್ವರ ವೃತ್ತಕ್ಕೆ ತಲುಪಿದರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ನೂರಾರು ಬಸವ ಅಭಿಮಾನಿಗಳು ಮಾನವ ಸರಪಳಿಯನ್ನು ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆದು ಈ ದುಷ್ಕೃತ್ಯವನ್ನು ಎಸೆದ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದೇವರ ಹಿಪ್ಪರಗಿ ಜಡಿಮಠದ ಸಿದ್ದೇಶ್ವರ ಶಿವಾಚಾರ್ಯರು. ಪಡೇ ಕನೂರದ ಮಲ್ಲಿಕಾರ್ಜುನ ಶ್ರೀಗಳು. ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹ್ಮದ್ ಖಾಜಿ ಗುಂಡುಕನಾಳದ ಗುರುಲಿಂಗ ಶ್ರೀಗಳು ಮಾತೋಶ್ರೀ ಕಾಶಿಬಾಯಿ ಅಮ್ಮನವರು ಮುಖಂಡರಾದ ವಿಜಯ ಸಿಂಗ್ ಹಜೇರಿ ಆರ್ ಎಸ್ ಪಾಟೀಲ ಕೂಚಬಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್ ಎಲ್ ಕೊಪ್ಪದ ಮಾತನಾಡಿ ಜಗಜ್ಯೋತಿ ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತರಾದ ಮಹಾಪುರುಷರಲ್ಲ ಅವರು ಸರ್ವ ಸಮಾಜದ ಆಸ್ತಿ ಅವರು ಜಗತ್ತಿಗೆ ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಕೊಟ್ಟಿದ್ದಾರೆ ಎಲ್ಲ ಸಮಾಜವನ್ನು ಅಪ್ಪಿಕೊಳ್ಳಿ ಎಂದು ತಿಳಿಸಿದ್ದಾರೆ ಇಂಥಹ ಮಹಾಪುರುಷನ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ತಪ್ಪಿತಸ್ಥ ಕಿಡಿಗೇಡಿಗಳಿಗೆ ಶಿಕ್ಷಿಸುವುದರ ಜೊತೆಗೆ ಅವರ ಹಿಂದಿರುವ ಶಕ್ತಿಗಳನ್ನು ಗುರುತಿಸಿ ಅವರನ್ನು ಶಿಕ್ಷಿಸುವ ಕೆಲಸ ಆಗಬೇಕು ಇಂಥಹ ಕೆಟ್ಟ ಘಟನೆಗಳು ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಈ ಸಮಯದಲ್ಲಿ ತಾಳಿಕೋಟಿ ಜಂಗಮ ಸಮಾಜದ ಗೌರವಾಧ್ಯಕ್ಷ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಶ್ರೀಗಳು. ಸಾಸನೂರಿನ ಮಹಾಂತಲಿಂಗ ಶಿವಾಚಾರ್ಯರು .ಕುಂಟೋಜಿ ಹಿರೇಮಠದ ಚನ್ನವೀರ ದೇವರು.ನಾವದಗಿಯ ರಾಜೇಂದ್ರ ಒಡೆಯರ್ ಪಟ್ಟದೇವರು. ದೇವರ ಹಿಪ್ಪರಗಿಯಪರದೇಶಿ ಮಠದ ಶಿವಯೋಗಿ ಶ್ರೀಗಳು .ಅಕ್ಕಮಹಾದೇವಿ ಮಾತಾಜಿ,ಮುರುಗೇಶ ವಿರಕ್ತ ಮಠ, ವಿರೂಪಾಕ್ಷಯ್ಯ ಹಿರೇಮಠ,ವೀರಶೈವ ಲಿಂಗಾಯತ ತಾಲೂಕ ಯುವ ಘಟಕದ ಅಧ್ಯಕ್ಷ ನಾಗರಾಜ ಬಳಗಾರ,ಮಹಾಂತೇಶ ಮರಾಳ,ಬಸನಗೌಡ ಮಾಲಿ ಪಾಟೀಲ. ಇಬ್ರಾಹಿಂ ಮನ್ಸೂರ ಶಫಿಕ ಇನಾಮದಾರ,ಪರಶುರಾಮ ತಂಗಡಗಿ,ಎಂ.ಕೆ .ಪಟ್ಟಣಶೆಟ್ಟಿ. ಡಾ. ವಿ. ಎಸ್. ಕಾರ್ಚಿ .ಡಾ.ನಜೀರ .ಜೈ ಭೀಮ್ ಮುತ್ತಗಿ,ಮಾನಸಿಂಗ ಕೊಕಟನೂರ .ಜಯಸಿಂಗ ಮೂಲಿಮನಿ. ಕಾಶಿನಾಥ ಮುರಾಳ. ನಬಿ ಹುಣಶ್ಯಾಳ. ಬಸವರಾಜ ಕುಂಬಾರ. ಡಿ.ವಿ .ಪಾಟೀಲ ಮತ್ತಿತರರು ಇದ್ದರು.